ಬೆಂಗಳೂರು: ಅದೆಷ್ಟೇ ಬಿಸಿಲಿದ್ರೂ ಬೆಂಗಳೂರಿನ ಇದೊಂದು ಲೇಔಟ್ ಮಾತ್ರ ತಣ್ಣಗಾಗಿರುತ್ತದೆ. ಯಾಕೆ ಗೊತ್ತಾ? ಈ ಲೇಔಟ್ ತುಂಬೆಲ್ಲ ಬರೀ ಮರಗಳೇ ಕಂಡುಬರುತ್ತವೆ. ಹಚ್ಚ ಹಸಿರು ಕಣ್ತಂಪು ಮಾಡುತ್ತದೆ. ಇದೇ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟಿಕೊಂಡು ತಮ್ಮ ಜೀವನಗಳನ್ನು ನಡೆಸುತ್ತಿದೆ. ಆದರೆ ಈಗ ಈ ಲೇಔಟ್ ನಲ್ಲಿ ಗೂಡು ಕಟ್ಟಿಕೊಂಡ ಹಕ್ಕಿಗಳಿದ್ದ ಮರಗಳನ್ನು ಕಡಿಯಲಾಗುತ್ತಿದೆ.
ಹೌದು… ಲೇಔಟ್ ಆಚೆ ಗಿಡ, ಮರ ಉಳಿಸಿ ಎಂದು ಬೋರ್ಡ್ ಹಾಕಿ ಲೇಔಟ್ ನ ಒಳಗೆ ಇರುವ ಮರಗಳನ್ನು ಕಡಿಯಲಾಗುತ್ತಿದೆ. ಅಷ್ಟಕ್ಕೂ ಈ ಮರಗಳನ್ನು ಕಡಿದಿರುವುದು ಎಲ್ಲೆಂದರೆ ನಗರದ ಬಿಟಿಎಂ ಲೇಔಟ್ ಐಎಎಸ್ ಆಫೀಸರ್ಸ್ ಬಡಾವಣೆಯಲ್ಲಿ. ಮರದಲ್ಲಿ ವಾಸಿಸುತ್ತಿರುವ ಹಕ್ಕಿಗಳಿಂದ ಉಸಿರಾಡಲು ತೊಂದರೆ ಆಗುತ್ತಿದೆ ಮತ್ತು ಆರೋಗ್ಯಕ್ಕೆ ತೊಂದರೆ ಆಗುತ್ತಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯಿಂದ ಬಿಬಿಎಂಪಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮರಗಳ ಮಾರಣಹೋಮ ಮಾಡಲಾಗ್ತಿದೆ. ಈಗ ಸ್ಥಳೀಯ ನಿವಾಸಿಗಳು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಂತೂ ಜನರು ಮರಗಳನ್ನು ಕಡಿಯಲು ಒಂದಲ್ಲ ಇನ್ನೊಂದು ಕಾರಣಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕೆ ಬಿಬಿಎಂಪಿ ಕೂಡ ತಾಳಕ್ಕೆ ತಕ್ಕಂತೆ ಕುಣಿದು ಮರಗಳ ಮಾರಣಹೋಮ ಮಾಡುತ್ತಿದೆ. ಬಿಬಿಎಂಪಿ ಅಧಿಕಾರಿಗಳು 5 ಮರಗಳನ್ನು ಕಡಿಯಲು ಆದೇಶ ಕೂಡಲೇ ಹಿಂಪಡೆಯಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
21/09/2022 07:23 pm