ಹೊಸಕೋಟೆ: ಕೊರೊನಾ ಸಂಕಷ್ಟ, ಇಲ್ಲದ ವ್ಯಾಪಾರ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗಳಿಂದ ಸಮಾಜದ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆಯ ಪೆಟ್ಟಿನಿಂದ ಬೋರ್ವೆಲ್ ವಾಹನ ಮಾಲೀಕರು ತೊಂದರೆಗಳಿಗೆ ಒಳಗಾಗಿದ್ದಾರೆ. ಕಳೆದ ಐದು ದಿನಗಳಿಂದ ಬೋರ್ವೆಲ್ ವಾಹನ ಮಾಲೀಕರು ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ಬೋರ್ವೆಲ್ ಗಾಡಿಗಳನ್ನ ಒಂದು ಕಡೆ ನಿಲ್ಲಿಸಿ ಮುಷ್ಕರ ನಡೆಸುತ್ತಿದ್ದಾರೆ.
ಒಬ್ಬ ರೈತ ತಮ್ಮ ಜಮೀನಿನಲ್ಲಿ ಕೃಷಿ ಮಾಡಬೇಕೆಂದ್ರೆ ಕೊಳವೆ ಬಾವಿ ಕೊರೆಸಿ ಭೂಗರ್ಭದಿಂದ ನೀರು ಮೇಲೆ ತೆಗೆಯಬೇಕು. ಆ ನೀರು ತೆಗೆಯಲು ಬೇಕಾಗಿರೋದೆ ಬೋರ್ವೆಲ್ ಕೊರೆಯೋ ಯಂತ್ರಗಳು. ಆದರೆ, ಇದೀಗ ಕಳೆದೊಂದು ವಾರದಿಂದ ಬೋರ್ವೆಲ್ ವಾಹನ ಮಾಲೀಕರು ತಮ್ಮ ಗಾಡಿಗಳನ್ನ ನಿಲ್ಲಿಸಿ ಹೊಸಕೋಟೆಯಲ್ಲಿ ಮುಷ್ಕರ ಕೈಗೊಂಡಿದ್ದಾರೆ. ಡಿಸೇಲ್ ಬೆಲೆ ಹೆಚ್ಚಳದಿಂದ ಬೋರ್ವೆಲ್ ವಾಹನ ಮಾಲೀಕರು ಕೊಳವೆ ಬಾವಿ ಕೊರೆಯಲು ತೆರಳದೇ ಸ್ಟ್ರೈಕ್ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗದ ಕೊಳವೆ ಬಾವಿ ಕೊರೆಯುವ ಬೋರ್ವೆಲ್ ವಾಹನ ಮಾಲೀಕರು,ತಮ್ಮ ವಾಹನ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ.
ಹೊಸಕೋಟೆ ಬಳಿಯ ಆಲಪ್ಪನಹಳ್ಳಿ ಬಳಿ ಸುಮಾರು 150 ಬೋರ್ವೆಲ್ ವಾಹನ ಗಾಡಿಗಳು ಒಂದೇ ಕಡೆ ನಿಲ್ಲಿಸಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ. ಪಾಯಿಂಟ್ ದರವನ್ನ ಹೆಚ್ಚಿಸಿಕೊಳ್ಳಲು ಎಲ್ಲರೂ ಅನುಮತಿ ಕೊಡಿ ಅಂತಾ ಒತ್ತಾಯಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಬೋರ್ವೆಲ್ ವಾಹನ ಮಾಲೀಕರಿಗೆ ಡೀಸೆಲ್ ದರ ಹೆಚ್ಚಳದಿಂದ ಒಂದು ಪಾಯಿಂಟ್ ಗೆ ಏನು ಸಿಗ್ತಿಲ್ಲ. ಹೀಗಾಗಿ ದರ ಹೆಚ್ಚಳಕ್ಕೆ ರೈತರು ಸೇರಿದಂತೆ ಕೊಳವೆ ಬಾವಿ ಕರೆಸುವ ಎಲ್ಲರೂ ಸಹರಿಸುವಂತೆ ಮನವಿ ಮಾಡಿದ್ದಾರೆ.
PublicNext
15/04/2022 07:10 pm