ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತವೊಂದು ದಂಪತಿಯ ಜೀವವನ್ನು ಬಲಿ ತೆಗೆದುಕೊಂಡು ಆರು ತಿಂಗಳಾಗಿದೆ. ಸೆಪ್ಟೆಂಬರ್ 15, 2021ರಂದು, ಬೈಲೇನ್‌ನಲ್ಲಿ ತಮ್ಮ ಬೈಕನ್ನು ನಿಲ್ಲಿಸಿದ್ದರು ದಂಪತಿ. ಆಗ ಅತಿವೇಗದಿಂದ ಬಂದ ಕಾರು ಡಿಕ್ಕಿ ಹೊಡೆದು ಮೇಲ್ಸೇತುವೆಯಿಂದ ಎಸೆದು ಮೃತಪಟ್ಟಿದ್ದರು. ಇದರಿಂದ ಮೇಲ್ಸೇತುವೆಯ ಸೈಡ್ ವಾಲ್ ಹಾಳಾಗಿದೆ.
ಅಂದಿನಿಂದಲೂ ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಪೊಲೀಸರು ಬೆಂಗಳೂರು ಎಲಿವೇಟೆಡ್ ಟೋಲ್ ವೇ ಸಿಬ್ಬಂದಿಗೆ ಹಾನಿಯನ್ನು ಸರಿಪಡಿಸಿ ಸಾರ್ವಜನಿಕ ಬಳಕೆಗೆ ಯೋಗ್ಯವಾಗಿಸಲು ಹೇಳುತ್ತಿದ್ದಾರೆ. ರಸ್ತೆ ಅಪಘಾತದ ಪರಿಣಾಮ ಕಾರು ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದ ಸೈಡ್‌ವಾಲ್‌ಗೆ ಸಾಕಷ್ಟು ಹಾನಿಯಾಗಿದೆ.
ಈಗ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯ ಹಾನಿಗೊಳಗಾದ ಭಾಗ ಬಿರುಕು ಬಿಟ್ಟಿದ್ದು, ಯಾವಾಗ ಬೇಕಾದರೂ ಸರ್ವಿಸ್ ರಸ್ತೆಯಲ್ಲಿ ಬೀಳುವ ಸಾಧ್ಯತೆಯಿದೆ. ಇದರಿಂದ ಕೆಳಕ್ಕೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಕೂಡಲೇ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಸಿಬ್ಬಂದಿ ಫ್ಲೈಓವರ್‌ನ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ, ಜನರನ್ನು ರಕ್ಷಿಸಬೇಕು.
- ನವೀನ್, 'ಪಬ್ಲಿಕ್ ನೆಕ್ಸ್ಟ್'
ಬೆಂಗಳೂರು
PublicNext
04/04/2022 08:45 pm