ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಂದಿಬೆಟ್ಟಕ್ಕೆ ವೀಕೆಂಡ್ ಜಾಲಿ ಬೈಕ್ ರೈಡ್; ಅತಿ ವೇಗಕ್ಕೆ ಯುವಕ ಡೆಡ್!

ದೊಡ್ಡಬಳ್ಳಾಪುರ: ವೀಕೆಂಡ್ ನಲ್ಲಿ ನಂದಿಬೆಟ್ಟ ಫುಲ್ ರಷ್. ಬೆಂಗಳೂರಿನಿಂದ ಜಾಲಿ ರೈಡ್ ನಲ್ಲಿ ಬರುವ ಯುವಕರಿಗೆ ನಂದಿಬೆಟ್ಟದಲ್ಲಿನ ಸನ್ ರೈಸ್ ನೋಡುವ ಹುಚ್ಚು. ಆದರೆ, ಜಾಲಿ ರೈಡ್ ನೆಪದಲ್ಲಿ ಬರುವ ಯುವಕರು ತಮ್ಮ ಅತಿ ವೇಗದ ಚಾಲನೆಯಿಂದ ಪ್ರಾಣವನ್ನೇ ಕಳೆದು ಕೊಳ್ತಾ ಇದ್ದಾರೆ.

ನಂದಿಬೆಟ್ಟ ತುದಿಯಿಂದ ಸನ್ ರೈಸ್ ನೋಡುವ ಮಜಾನೇ ಬೇರೆ. ಈ ಆಸೆಗೆ ಮಧ್ಯರಾತ್ರಿಯಿಂದಲೇ ನಂದಿಬೆಟ್ಪಕ್ಕೆ ಯುವಕರು ಲಗ್ಗೆ ಇಡ್ತಾರೆ. ಇದೇ ಆಸೆಯಲ್ಲೇ ಬಂದ ಬೆಂಗಳೂರಿನ ಶ್ರೀನಗರದ ಯುವಕ ಬೈಕ್ ಅಪಘಾತದಲ್ಲಿ ಜೀವ ಕಳೆದುಕೊಂಡಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಕಣಿವೇಪುರದಲ್ಲಿ ಇಂದು ಮುಂಜಾವ 5:30ರ ವೇಳೆ ನಡೆದ ಅಪಘಾತದಲ್ಲಿ 26 ವರ್ಷದ ರಾಕೇಶ್ ಸ್ಥಳದಲ್ಲೇ ಪ್ರಾಣ ಕಳೆದು ಕೊಂಡ್ರೆ, ಸುನಿಲ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

ರಾಕೇಶ್ ಮತ್ತು ಸುನಿಲ್ ನಂದಿಬೆಟ್ಟದಲ್ಲಿನ ಸೂರ್ಯೋದಯ ನೋಡಲು ಬೈಕ್ ನಲ್ಲಿ ಹೊರಟಿದ್ರು. ಮುಂಜಾವ 4ಕ್ಕೆ ಬೆಂಗಳೂರು ಬಿಟ್ಟಿದ್ದ ಅವರು, ನಂದಿಬೆಟ್ಟದ ಸನಿಹ ಬಂದಿದ್ರು. ಅತಿವೇಗದಿಂದ ಬೈಕ್ ನಿಯಂತ್ರಣ ಕಳೆದುಕೊಂಡ ಅವರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ. ಅಪಘಾತದ ತೀವ್ರತೆಯಲ್ಲಿ ರಾಕೇಶ್ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮತ್ತೊಬ್ಬ ಸವಾರ ಸುನಿಲ್ ನ ಬೆನ್ನೆಲುಬು ಮುರಿದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಅಂದ ಹಾಗೇ ವೀಕೆಂಡ್ ಬಂದ್ರೆ ನಂದಿಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲ. ಬೆಂಗಳೂರಿನಿಂದ ಸಾಗರದಂತೆ ಬರುವ ವಾಹನಗಳ ಓಡಾಟದಿಂದ ರಸ್ತೆ ದಾಟುವುದಕ್ಕೂ ಜನ ಹೆದರುತ್ತಾರೆ. ಅತಿವೇಗವಾಗಿ ಬರುವ ವಾಹನಗಳ ಆರ್ಭಟಕ್ಕೆ ಈಗಾಗಲೇ ಸಾಕಷ್ಟು ಮಂದಿ ಪ್ರಾಣ ಕಳಕೊಂಡಿದ್ದಾರೆ. ಅಪಘಾತಕ್ಕೆ ಕಡಿವಾಣ ಹಾಕಲು ಗ್ರಾಮಗಳ ಬಳಿ ಹಂಪ್ಸ್ ನಿರ್ಮಿಸಬೇಕಿದೆ ಮತ್ತು ವೀಕೆಂಡ್ ನಲ್ಲಿ ಪೊಲೀಸರನ್ನು ನಿಯೋಜಿಸಿ, ಜಾಲಿ ಬೈಕ್ ರೈಡರ್‌ ಗಳಿಗೆ ಬ್ರೇಕ್ ಹಾಕಬೇಕಿದೆ.

Edited By : Somashekar
Kshetra Samachara

Kshetra Samachara

19/06/2022 11:15 pm

Cinque Terre

4.87 K

Cinque Terre

0

ಸಂಬಂಧಿತ ಸುದ್ದಿ