ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ರಾಜಧಾನಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣ ಇರುವ ವ್ಯಕ್ತಿ ಪತ್ತೆ!

ವರದಿ-ಗಣೇಶ್ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಇರುವ ವ್ಯಕ್ತಿ ಪತ್ತೆಯಾಗಿರುವ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದು ಬಂದಿದೆ.

ಆಫ್ರಿಕಾ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣ ಕಂಡು ಬಂದಿದೆ. ಈ ಸಂಬಂಧ ನಗರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಹೆಚ್ಚಿನ ಶುಶ್ರೂಶೆ ಹಾಗೂ ನಿಗಾ ವಹಿಸಲಾಗಿದೆ.

ಜುಲೈ 4 ತಾರೀಖು ನಂದು ಇಥಿಯೋಪಿಯದಿಂದ ಬೆಂಗಳೂರಿಗೆ ಈ ರೋಗಿ ಬಂದಿದ್ದಾನೆ. ಕಿಡ್ನಿ ಕಸಿ ಮಾಡಲು ಬೆಂಗಳೂರು ಆಗಮಿಸಿದ್ದ ಆಫ್ರಿಕಾ ಮೂಲದ ಈ ವ್ಯಕ್ತಿ.

ಈ ಸಂದರ್ಭದಲ್ಲಿ ಮೈಮೇಲೆ ತುರಿಕೆ ಹಾಗೂ ದೇಹದ ಕೆಲ ಭಾಗದಲ್ಲಿ ಸಣ್ಣ ಗುಳ್ಳೆಗಳು ಕಂಡು ಬಂದಿದ್ದು, ಇದರ ಸ್ಯಾಂಪಲ್ ಅನ್ನು ಪುಣೆಯ NIV ಗೆ ಕಳುಹಿಸಲಾಗಿದೆ.

Edited By :
PublicNext

PublicNext

30/07/2022 11:45 am

Cinque Terre

15.83 K

Cinque Terre

2

ಸಂಬಂಧಿತ ಸುದ್ದಿ