ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜೂನ್ ಕೊನೆಯಲ್ಲಿ ಜಯದೇವ್ ಆಸ್ಪತ್ರೆಯಲ್ಲಿ ಉಚಿತ ಆಂಜಿಯೋ ಪ್ಲಾಸ್ಟಿ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಉಚಿತ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ನಡೆಸಲಾಗ್ತಿದೆ. ಜೂನ್ 24 ರಿಂದ 26 ರವರೆಗೆ ನಡೆಯುವ ಕಾರ್ಯಾ ಗಾರದಲ್ಲಿ 150 ಬಡರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಕೆ ಮಾಡಲಾಗುತ್ತದೆ.‌

ಜಯದೇವ ಸಂಸ್ಥೆಯು ಮಾನಿಕ್ಸ್, ಅಮೆರಿಕ ಹಾಗೂ ಡಾ.ಗೋವಿಂದರಾಜು ಸುಬ್ರಮಣಿ ಪಾರ್ಟ್ ಫೌಂಡೇಷನ್, ವಿನ್ ಸನ್ ಸಹಯೋಗದೊಂದಿಗೆ ಈ ಕಾರ್ಯಾಗಾರ ಜರುಗಲಿದೆ.

ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು ಜೂನ್ 20 ರೊಳಗೆ ನೋ೦ದಾಯಿಸಿಕೊಳ್ಳಲು ಸೂಚಿಸಲಾಗಿದೆ. ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ವರೆಗೆ ಸಮಯ ನಿಗದಿ ಮಾಡಲಾಗಿದೆ.‌

Edited By : PublicNext Desk
Kshetra Samachara

Kshetra Samachara

01/06/2022 09:42 pm

Cinque Terre

824

Cinque Terre

0

ಸಂಬಂಧಿತ ಸುದ್ದಿ