ಬೆಂಗಳೂರು ದಕ್ಷಿಣ: ಕೋವಿಡ್ ಪ್ರಕರಣಗಳು ಕಡಿಮೆಯಾದ ನಂತರವೂ ಬೆಂಗಳೂರು ದಕ್ಷಿಣದಲ್ಲಿ ಅನೇಕ ಜನರು ದೇವಾಲಯಗಳಿಗೆ ಬಂದಿಲ್ಲ. ಸಂಜೆಯಾದರೂ ದೇವಸ್ಥಾನದ ಬಳಿ ಭಕ್ತರ ಸುಳಿವಿರಲಿಲ್ಲ!
ಕೋವಿಡ್ ಗೆ ಮೊದಲು ಎಲ್ಲಾ ದೇವಾಲಯಗಳು ಜನಸಂದಣಿಯಿಂದ ತುಂಬಿರುತ್ತಿದ್ದವು. ಆದರೆ, ಪ್ರಮುಖ ಹಬ್ಬ ಯುಗಾದಿ ದಿನವಾದ ಇಂದೂ ದೇವಾಲಯಗಳು ಖಾಲಿ ಖಾಲಿಯಾಗಿಯೇ ಇತ್ತು. ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್, ವಿಜಯ ಬ್ಯಾಂಕ್ ಕಾಲೋನಿಯ ದೇವಸ್ಥಾನಗಳಲ್ಲಿ ಬೆರಳೆಣಿಕೆಯ ಭಕ್ತಾದಿಗಳಷ್ಟೇ ಕಂಡುಬಂದರು.
- ನವೀನ್, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
02/04/2022 09:22 pm