ವರದಿ- ಬಲರಾಮ್ ವಿ
ಬೆಂಗಳೂರು: ಬಾತ್ ರೂಮ್‌ನಲ್ಲಿ ಬಿದ್ದು ಕೈಗೆ ಗಾಯವಾಗಿದ್ದ ಹಿನ್ನೆಲೆ ಮುಂಗೈ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಸಾವನ್ನಪ್ಪಿರುವ ಘಟನೆ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್ತಹಳ್ಳಿಯ ಜೀವಕಾ ಆಸ್ಪತ್ರೆಯಲ್ಲಿ ನಡೆದಿದೆ.
ತೇಜಸ್ವಿನಿ ಮೃತ ಗಾಯಾಳು. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತೇಜಸ್ವಿನಿ ಸಾವನ್ನಪ್ಪಿದ್ದಾಳೆ ಎಂದು ಜೀವಿಕಾ ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. ತೇಜಸ್ವಿನಿ ಮೂಲತಃ ಬಾಗೇಪಲ್ಲಿ ತಾಲೂಕಿನವರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ತೇಜಸ್ವಿನಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದು, ಬಾತ್ ರೂಮ್‌ನಲ್ಲಿ ಬಿದ್ದ ಕಾರಣ ಕೈ ಸರ್ಜರಿ ಮಾಡಿಸಿಕೊಳ್ಳಲು ಜೀವಿಕ ಆಸ್ಪತ್ರೆಗೆ ದಾಖಲು ಆಗಿದ್ದರು.
ತೇಜಸ್ವಿನಿ ಅವರನ್ನು ಇಂದು ಮಧ್ಯಾಹ್ನ 12ಕ್ಕೆ ವೈದ್ಯರು ಗಾಯಾಳನ್ನು ಸರ್ಜರಿ ಕರೆದೊಯ್ದಿದ್ದರು. ಸಂಜೆ 4 ಗಂಟೆಗೆ ಸರ್ಜರಿ ವೇಳೆ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸುತ್ತಿದ್ದಂತೆ. ಇತ್ತ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಸ್ತೇಷಿಯಾ ನೀಡಿದ್ದ ಡಾ. ಶಶಾಂಕ್, ಡಾ.ಅಶೋಕ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದ್ದು, HAL ಪೊಲೀಸರು ಡಾಕ್ಟರ್ ಶಶಾಂಕ್ರನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುವಿನ ಮರಣೋತ್ತರ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
PublicNext
30/05/2022 09:38 pm