ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ.ರಮಣ ರಾವ್ ಮೇಲೆ ಪುನೀತ್ ಫ್ಯಾನ್ಸ್ ಭಾರಿ ಆರೋಪ:ಇದಕ್ಕೆ ಡಾಕ್ಟರ್ ಈಗ ಏನಂತಾರೆ

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನ ಇಡೀ ರಾಜ್ಯಕ್ಕೆ ನೋವು ತಂದಿದೆ.ಅಭಿಮಾನಿಗಳಂತೂ ಬೇಸರದಲ್ಲಿಯೇ ಪುನೀತ್ ಗೆ ಪ್ರಥಮ ಚಿಕಿತ್ಸೆ ನೀಡಿದ ಡಾಕ್ಟರ್ ರಮಣ ರಾವ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡ್ತಿದ್ದಾರೆ. ವೈದ್ಯರಿಗೆ ಈಗ ಪೊಲೀಸ್ ಪ್ರೋಟೆಕ್ಷನ್ ಕೂಡ ಕೊಡಲಾಗಿದೆ.ಹೀಗಿರೋವಾಗ ಇದಕ್ಕೆ ಸ್ಪಷ್ಟ ಉತ್ತರ ಅನ್ನೋ ಹಾಗೇನೆ ರಮಣ ರಾವ್ ಈಗ ಮಾತನಾಡಿದ್ದಾರೆ. ನನ್ನ ಮಗನಿಗೆ ಒಂದು ವೇಳೆ ಈ ತರ ಆಗಿದ್ದರೇ, ಅವನಿಗೆ ಯಾವ ಚಿಕಿತ್ಸೆ ಕೊಡುತ್ತಿದ್ದೆನೋ ಅದೇ ಚಿಕಿತ್ಸೆಯನ್ನ ಪುನೀತ್ ರಾಜ್ ಕುಮಾರ್ ಗೆ ಕೊಟ್ಟಿದ್ದೇನೆ ಎಂದಿದ್ದಾರೆ ಡಾಕ್ಟರ್ ರಮಣ ರಾವ್. ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಪುನೀತ್ ಫ್ಯಾಮಿಲಿ ಡಾಕ್ಟರ್ ರಮಣ ರಾವ್ ಈಗೀನ ಬೆಳವಣಿಗೆಗೆ ಸಂಬಂಧಿಸಿಂದಂತೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ್ ಅಭಿಮಾನಿಗಳು ಇಲ್ಲ ಸಲ್ಲದ ಮಾತುಗಳನ್ನ ಆಡುತ್ತಿದ್ದಾರೆ. ಅವರಿಗೆ ಸ್ಪಷ್ಟ ಉತ್ತರ ಅನ್ನೋ ರೀತಿಯಲ್ಲಿಯೇ ಡಾಕ್ಟರ್ ರಮಣ ರಾವ್,ಪುನೀತ್ ಸಾವಿನ ಆ ದಿನವನ್ನ ಮತ್ತೆ ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ 11.50-11-20 ಸಮಯಕ್ಕೆ ನಮ್ಮ ಕ್ಲಿನಿಕ್ ಗೆ ನಡೆದು ಕೊಂಡೇ ಬಂದರು. ಪುನೀತ್ ಅವರನ್ನ ಕೇವಲ 4 ರಿಂದ 5 ನಿಮಷದಲ್ಲಿ ಪರೀಕ್ಷಿಸಿದೆ. ಆಗ ಪುನೀತ್ ಶ್ವಾಸಕೋಶ ಮತ್ತು ಹೃದಯ ಬಡಿತ ಎಲ್ಲವೂ ಸಹಜವಗಿಯೇ ಇತ್ತು.ಆದರೆ ತುಂಬಾ ಬೆವರುತ್ತಿದ್ದರು. ಯಾಕೆ ಇಷ್ಟು ಬೆವರುತ್ತಿದ್ದಾರೆ ಅಂದೆ, ನಾನು ಜಿಮ್ ಮಾಡ್ತೀನಲ್ವೆ. ಅದಕ್ಕೆ ಬೆವರುತ್ತಿದ್ದೇನೆ. ಇದು ನನಗೆ ಕಾಮನ್ ಅಂದ್ರು ಪುನೀತ್. ಆದರೂ ಇಸಿಜಿ ಮಾಡಿದೆ. ಎರಡು ಎರಡೂ ವರೆ ನಿಮಿಷಿದಲ್ಲಿ ಇಸಿಜಿ ಮುಗಿಸಿದೆ.ವರದಿಯನ್ನೂ ನೋಡಿದೆ.ಅದರಲ್ಲಿ ಹೃದಯಕ್ಕೆ ತುಂಬಾ ಒತ್ತವಾಗಿದೆ ಅನ್ನೋ ವಿಷಯ ತಿಳಿತು.

ಪುನೀತ್ ಅವರಿಗೆ ಸುತ್ತು ಕಾಣಿಸಿಕೊಂಡಿತು. ನಡೆದುಕೊಂಡು ಹೋಗಬೇಡಿ.ಎತ್ತಿಕೊಂಡೇ ಹೋಗುತ್ತವೇ ಅಂತಲೇ ಅವರಿಗೆ ಹೇಳಿಯೇ ಮೂವರ ಸಹಾಯ ತೆಗೆದುಕೊಂಡು ಕಾರಿನಲ್ಲಿ ಮಲಗಿಸಿದೇವು. ಆಗ ಪುನೀತ್ ಪ್ರತಿಕ್ರಿಯೆಸುತ್ತಿದ್ದರು.ಪಲ್ಸ್ ರೇಟ್ ಸಹಜವಾಗಿಯೇ ಇತ್ತು.ಉಸಿರಾಡುತ್ತಲೂ ಇದ್ದರು.ಈ ಕಾರಣಕ್ಕೇನೆ ಸಿಪಿಆರ್ ಟೆಸ್ಟ್ ಮಾಡಲಿಲ್ಲ.ಉಳಿದಂತೆ ವೈದ್ಯಕೀಯ ಶಿಷ್ಟಾಚಾರದ ಪ್ರಕಾರ ಅವರಿಗೆ ಚಿಕಿತ್ಸೆ ನೀಡಿದ್ದೇನೆ ಎಂದಿದ್ದಾರೆ ರಮಣ ರಾವ್.

ಆಂಬ್ಯುಲೆನ್ಸ್ ಇಲ್ಲಿಗೆ ಬರಲು 10-15 ನಿಮಿಷ ಆಗುತ್ತಿತ್ತು. ಅದಕ್ಕೇನೆ ನಮ್ಮ ಕಾರ್ ನಲ್ಲಿಯೇ ಅವರನ್ನ ವಿಕ್ರಂ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದೇನೆ. ನನ್ನಿಂದ ಯಾವುದೇ ಸಮಸ್ಯೆ ಆಗಿಲ್ಲ. ಅವರಿಗೆ ಕೊಡಬೇಕಾದ ಎಲ್ಲ ಚಿಕಿತ್ಸೆಯನ್ನ ಕೊಟ್ಟಿದ್ದೇನೆ. ನಮ್ಮದು ಚಿಕ್ಕ ಕ್ಲಿನಿಕ್.ಈ ಕಾರಣಕ್ಕೇನೆ ಪುನೀತ್ ರನ್ನ ವಿಕ್ರಂ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದೇನೆ ಎಂದಿದ್ದಾರೆ ಡಾಕ್ಟರ್ ರಮಣ ರಾವ್.

Edited By :
Kshetra Samachara

Kshetra Samachara

06/11/2021 04:06 pm

Cinque Terre

284

Cinque Terre

0

ಸಂಬಂಧಿತ ಸುದ್ದಿ