ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವ್ಯಾಕ್ಸಿನ್ ಬಗ್ಗೆ ಜನರ ಉದಾಸೀನ- ಮನೆಗೆ ತೆರಳಿ ಲಸಿಕೆ ಹಾಕಿಸಲು ಸಜ್ಜಾದ ಬಿಬಿಎಂಪಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 3 ಲಕ್ಷ ಮಂದಿ ಇನ್ನೂ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಹೀಗಾಗಿ ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ಡೋಸ್ ಪಡೆಯದೇ ಇರುವವರ ಮನೆಗೆ ಹೋಗಿ ಲಸಿಕೆ ನೀಡುತ್ತಿದೆ.

'ಕೋವಿಡ್ ಮೂರನೇ ಅಲೆಯು ದೊಡ್ಡ ಪ್ರಮಾಣದಲ್ಲಿ ಅನಾಹುತ ಸೃಷ್ಟಿ ಮಾಡದ ಹಿನ್ನೆಲೆಯಲ್ಲಿ ಕೆಲವರು ಲಸಿಕೆ ಬಗ್ಗೆ ಉದಾಸೀನ ತೋರಿಸುತ್ತಿದ್ದಾರೆ. ಆದರೆ ಲಸಿಕೆ ಪಡೆಯದೇ ಇರುವವರ ಮೇಲೆ ಸೋಂಕು ಗಂಭೀರ ಪರಿಣಾಮ ಬೀರಿರುವುದನ್ನು ಗಮಿನಿಸಿದ್ದೇವೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ಹೇಳಿದ್ದಾರೆ.

ಮನೆ ಬಾಗಿಲಿಗೆ ಲಸಿಕೆ:

'ಬಿಬಿಎಂಪಿಯು ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಏಳು ಲಕ್ಷ ಅರ್ಹ ನಾಗರಿಕರ ಮನೆಗೆ ತೆರಳಿ ಲಸಿಕೆ ನೀಡಿದೆ. ಸದ್ಯ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಹೆಚ್ಚಿನ ವೈದ್ಯರು, ಸ್ಕ್ಯಾಬ್ ಕಲೆಕ್ಟರ್‌ಗಳು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸಿಕೊಳ್ಳಲು ಸರಕಾರದ ಅನುಮೋದನೆಯನ್ನು ಕೋರಿದ್ದೇವೆ’ ಎಂದು ಅವರು ಹೇಳಿದರು. ಎರಡನೇ ಡೋಸ್‌ಗೆ ಅರ್ಹರಾದ 91 ಲಕ್ಷ ಜನರ ಪೈಕಿ, 89 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಪ್ರಸ್ತುತ ಬಿಬಿಎಂಪಿಯು ದಿನಕ್ಕೆ 3,000 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ತಜ್ಞರು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದ ಬೆನ್ನಲ್ಲೇ ಬಿಬಿಎಂಪಿ ನಗರದಲ್ಲಿ ಕೋವಿಡ್‌- ಸೂಕ್ತ ನಡವಳಿಕೆ ಅನುಷ್ಠಾನವನ್ನು ಪ್ರಾರಂಭಿಸಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು 30 ಮಾರ್ಷಲ್‌ಗಳನ್ನು ನಿಯೋಜಿಸಿದೆ. ಮಾರುಕಟ್ಟೆ ಜನನಿಬಿಡ ಸ್ಥಳಗಳಾಗಿವೆ. ಹೀಗಾಗಿ 30 ಮಾರ್ಷಲ್‌ಗಳನ್ನು ನಿಯೋಜಿಸಲಾಗಿದೆ. ನಿಯಮಿತ ಘನತ್ಯಾಜ್ಯ ನಿರ್ವಹಣೆ ಕರ್ತವ್ಯದಲ್ಲಿರುವ ಮಾರ್ಷಲ್‌ಗಳಿಗೆ, ಅದರ ಜತೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯ ಬಗೆಗೂ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

Edited By : Vijay Kumar
Kshetra Samachara

Kshetra Samachara

29/04/2022 11:02 pm

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ