ಬೆಂಗಳೂರು: ಕೊರೊನಾ 4ನೇ ಅಲೆಯ ಹಿನ್ನೆಲೆಯಲ್ಲಿ ಬಿಬಿಎಂಪಿ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ ನಾಲ್ಕು ಸರ್ಕಾರಿ ಆಸ್ಪತ್ರೆಗಳಲ್ಲಿ 2000 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತಿದೆ ಮತ್ತು ICU ಬೆಡ್ ಗಳ ಪೂರ್ವಸಿದ್ಧತೆ ಬಿಬಿಎಂಪಿ ಮಾಡಿಕೊಳ್ಳುತ್ತಿದೆ.
ಕೋವಿಡ್ ಟೆಸ್ಟಿಂಗ್ ಗಳನ್ನು ಜಾಸ್ತಿ ಮಾಡಲು ಬಿಬಿಎಂಪಿ ಸಜ್ಜಾಗುತ್ತಿದೆ. ಬೆಂಗಳೂರಿನ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಲಾಗಿದೆ.
ಎರಡನೇ ಅಲೆಯಲ್ಲಿ ಬೆಡ್ ಗಳ ಕೊರತೆ ಕಂಡುಬಂದಿತ್ತು. ಈ ಬಾರಿ ಯಾವುದೇ ಬೆಡ್ ಗಳ ಕೊರತೆ ಆಗದಂತೆ ಬಿಬಿಎಂಪಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ.
- ನವೀನ್ 'ಪಬ್ಲಿಕ್ ನೆಕ್ಸ್ಟ್' ಬೆಂಗಳೂರು
PublicNext
27/04/2022 05:47 pm