ದೇವನಹಳ್ಳಿ : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ 'ವೈದ್ಯರ ನಡೆ... ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೊರೊನಾ ಬಂದು ಸತ್ತರೂ ಪರ್ವಾಗಿಲ್ಲ, ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲವೆಂದು ವೃದ್ಧರೊಬ್ಬರು ಆರೋಗ್ಯ ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ!
ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 'ವೈದ್ಯರ ನಡೆ... ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ಜನರಿಗೆ ಲಸಿಕೆ ಹಾಕಲಾಗುತ್ತಿದ್ದು, ಲಸಿಕೆ ಹಾಕಿಸಿಕೊಳ್ಳಲು ವೃದ್ಧರೊಬ್ಬರು "ನಾವು ಮನೆಯಲ್ಲಿರೋದೆ ಇಬ್ಬರು. ಇಬ್ಬರಿಗೂ ವಯಸ್ಸಾಗಿದೆ. ಒಂದು ವೇಳೆ ಲಸಿಕೆ ಹಾಸ್ಕೊಂಡ್ ಆರೋಗ್ಯದಲ್ಲಿ ಏರುಪೇರಾದ್ರೆ ನಮ್ಮನ್ನು ನೋಡಿಕೊಳ್ಳುವವರು ಯಾರು? ಕೊರೊನಾ ಬಂದು ಸಾಯ್ತಿವಿ ಹೊರತು ಲಸಿಕೆ ಹಾಕಿಸಿಕೊಳ್ಳಲ್ಲ " ಎಂದು ಹಠ ಹಿಡಿದಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಟ್ ಮಾಡ್ತೀವಿ ಅಂದಿದ್ದಕ್ಕೆ, "ನೀವು ರೇಷನ್ ಕಟ್ ಮಾಡಿದ್ರೆ, ನಾವು ವೋಟ್ ಹಾಕೋದಿಲ್ಲ" ಎಂದು ಜವಾಬ್ ನೀಡಿದರು. ಆರೋಗ್ಯ ಸಿಬ್ಬಂದಿ ಎಷ್ಟೇ ಮನ ಓಲೈಸಿದರೂ ಲಸಿಕೆ ಹಾಕಿಕೊಳ್ಳಲೇ ಇಲ್ಲ! ವೃದ್ಧ ಮಹಾಶಯರು.
PublicNext
23/01/2022 03:24 pm