ಬೆಂಗಳೂರು: ಕೊರೋನಾ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಸರ್ಕಾರವು ಕೂಡಾ ಒಂದಲ್ಲವೊಂದು ನಿಯಮಗಳು ಜಾರಿ ಮಾಡುವ ಮೂಲಕ ಕೋವಿಡ್ ತಡೆಗೆ ಕ್ರಮಕೈಗೊಳ್ಳುತ್ತಿದೆ.ಆದರೆ ಸಾರ್ವಜನಿಕರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಹಬ್ಬದ ವ್ಯಾಪರದ ನೆಪದಲ್ಲಿ ಗುಂಪು ಗುಂಪಾಗಿ ಯಾವುದೇ ಮಾಸ್ಕ್ ಧರಿಸದೇ ವ್ಯಾಪಾರದಲ್ಲಿ ಸಕ್ರೀಯರಾಗಿದ್ದಾರೆ.ಹೌದು ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರದ ಸಂತೆಯಲ್ಲಿ ಸಾರ್ವಜನಿಕರು ರಸ್ತೆಯುದ್ದಗಲಕ್ಕೂ ಹಬ್ಬಕ್ಕೆ ವ್ಯಾಪಾರ ಮಾಡುವ ಮೂಲಕ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಕೆಆರ್ ಪುರ ಬಿಬಿಎಂಪಿ ಕಛೇರಿಯ ಪಕ್ಕದಲ್ಲೇ ಸಂತೆಯಿದ್ದು, ಅಧಿಕಾರಿಗಳು ಮಾತ್ರ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
PublicNext
14/01/2022 09:17 pm