ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರಿ ವೈರಾಣು ಒಮಿಕ್ರಾನ್ ತಾಂಡವ ಆಡ್ತಿದೆ. ಮೂರನೇ ಅಲೆಯ ಭೀತಿ ಎಲ್ಲೆಡೆ ಸೃಷ್ಟಿಯಾಗುತ್ತಿದೆ. ಆದರೆ ಸೋಂಕಿತರು ಸಂಖ್ಯೆ ಹೆಚ್ಚಾದ್ರೂ ಶೇ.5% ಕ್ಕಿಂತ ಕಡಿಮೆ ಇದೆ. ವಿಪರ್ಯಾಸ ಅಂತಂದ್ರೆ ಸಕ್ರಿಯ ಪ್ರಕರಣಗಳ ಏರಿಕೆ ಕಾಣ್ತಿದ್ದರೂ ಆಸ್ಪತ್ರೆ ಸೇರುತ್ತಿರುವವ ಸಂಖ್ಯೆ ವಿರಳವಾಗಿದೆ.
ಮೂರನೇ ಅಲೆಯ ಆತಂಕದ ನಡುವೆ ಜನವರಿ 9 ರಂದು ಕರ್ನಾಟಕದಲ್ಲಿ 49,602 ಸೋಂಕಿತ ರೋಗಿಗಳಿದ್ದು, ಅವರಲ್ಲಿ 2,162 (ಅಥವಾ 4. 4%) ಮಾತ್ರ ಆಸ್ಪತ್ರೆಯಲ್ಲಿ ಇದ್ದರೇ,ಇನ್ನೂ 53 ರೋಗಿಗಳು (0. 1%) ಮಾತ್ರ ICU ನಲ್ಲಿದ್ದಾರೆ.
ಆದರೆ 2ನೇ ಅಲೆಯಲ್ಲಿ ಅಂದ್ರೆ ಏಪ್ರಿಲ್ 7, 2021 ರಂದು ರಾಜ್ಯದಲ್ಲಿ 49,254 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಅದರಲ್ಲಿ 353 (0. 7%) ICU ನಲ್ಲಿದ್ದರು. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2ನೇ ಅಲೆಯ ಸಂದರ್ಭದಲ್ಲಿ ಪ್ರಕರಣಗಳ ಏರಿಕೆಯ ಸಮಯದಲ್ಲಿ, 1,27,762 ರೋಗಿಗಳಲ್ಲಿ 30% 2021 ರ ಏಪ್ರಿಲ್ 15 ಮತ್ತು 22 ರ ದಿನಾಂಕದ ನಡುವೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಂಕ್ರಾಂತಿಯ ಬಳಿಕ ಮತ್ತಷ್ಟು ಪ್ರಕರಣಗಳು ಏರಿಕೆ ಕಾಣುವ ಆತಂಕವನ್ನು ತಜ್ಞರು ವ್ಯಕ್ತಪಡಿದ್ದಾರೆ.ಆದರೆ ಒಮಿಕ್ರಾನ್ ಮಾತ್ರ ಡೆಲ್ಟಾ ವೈರಸ್ ನಷ್ಟು ಮಾರಕವಲ್ಲ ಎಂಬುದು ಅಂಕಿ ಅಂಶಗಳ ಪ್ರಕಾರ ಸಾಭೀತಾಗಿದೆ. ಆಸ್ಪತ್ರೆ ಸೇರುವವರ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.
PublicNext
12/01/2022 01:47 pm