ನೆಲಮಂಗಲ : ಬೆಂ.ಗ್ರಾ.ಜಿಲ್ಲೆ ನೆಲಮಂಗಲ ತಾಲ್ಲೂಕಿನಲ್ಲಿ ಕೊರೊನಾ ಹೆಚ್ಚಳವಾದ ಹಿನ್ನಲೆಯಲ್ಲಿ ಬೆಂ.ಗ್ರಾ. ಜಿಲ್ಲಾಧಿಕಾರಿ ಕೆ. ಶ್ರೀನಿವಾಸಿ ಸ್ಥಳಕ್ಕೆ ಭೇಟಿ ನೀಡಿದರು.
ನೆಲಮಂಗಲ ತಾಲ್ಲೂಕು ದಂಡಾಧಿಕಾರಿ, ಆರೋಗ್ಯ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಡಿಸಿ ಕೊರೊನಾ ಸಂಬಂಧ ಸಭೆಯಲ್ಲಿ ಕೆಲ ಮಾರ್ಗದರ್ಶನ ನೀಡಿದರು.
ಅಲ್ಲದೆ ನೆಲಮಂಗಲದಲ್ಲಿ ಕೊರೊನಾ ಕೇರ್ ಸೆಂಟರ್ ತೆರೆಯಲು ನಿರ್ಧಾರ ಮಾಡಿದ್ದು,ಕೆಲ ಸೋಂಕಿತರಿಗೆ ಹೋಂ ಐಸೋಲೇಶನ್ ಮಾಡಲು ನಿರ್ಧಾರಿಸಲಾಗಿದೆ. ಸದ್ಯ ನೆಲಮಂಗಲದಲ್ಲಿ 56 ಮಂದಿ ಸೋಂಕಿತರ ಪೈಕಿ 33 ಮಂದಿ ಆಸ್ಪತ್ರೆಯಲ್ಲಿ ಖಲಾಗಿದ್ದು,ಉಳಿದವರನ್ನ ಹೋಂ ಐಸೋಲೇಶನ್ ನಲ್ಲಿಟ್ಟಿದ್ದೇವೆ ಎಂದರು.
ಈಗಾಗಲೇ ತಾಲ್ಲೂಕಿನ ಸಿದ್ಧಾರ್ಥ ಆಸ್ಪತ್ರೆ ಕೋವಿಡ್ ಕೇರ್ ಸೆಂಟರ್ ನಲ್ಲಿ 50 ಆಕ್ಸಿಜನ್ ಬೆಡ್, 150 ಜನರಲ್ ಬೆಡ್ ವ್ಯವಸ್ಥೆ ಹೊಂದಿದೆ. ಹೀಗಾಗಿ ಸಮಸ್ಯೆ ಆಗುವುದಿಲ್ಲ. ಕೊರೊನಾ 2 ಅಲೆಗಿಂತ, 3ನೇ ಅಲೆ ಪಾಸಿಟಿವಿಟಿ ರೇಟ್ ಹೆಚ್ಚಿದ್ರು ತೀವ್ರತೆ ಕಡಿಮೆ ಇದೆ. ಹಾಗಂತ ನಿರ್ಲಕ್ಷ್ಯ ಮಾಡುವುದಲ್ಲ, ಪಾಸಿಟಿವಿಟಿ ರೇಟ್ ಕಡಿಮೆ ಆಗೋ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ.
ಒಟ್ಟಾರೆಯಲ್ಲಿ ಸರ್ಕಾರದ ಸುತ್ತೋಲೆಯಂತೆ ತಾಲ್ಲೂಕಿನ ಜನರು ಓಡಾಟ ಕಡಿಮೆ ಮಾಡಬೇಕು, ನಿಯಮ ಪಾಲನೆ ಮಾಡಿ ಎಚ್ಚರಿಕೆಯಿಂದಿರಬೇಕು ಎಂದು ಬೆಂ.ಗ್ರಾ.ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಮನವಿ ಮಾಡಿದ್ದಾರೆ.
Kshetra Samachara
08/01/2022 09:18 pm