ಬೆಂಗಳೂರಿನಲ್ಲಿ ಇಲ್ಲಿಯವೆರೆಗೆ 3,605 ಕೊರೊನಾ ಕೇಸ್ ದಾಖಲಾಗಿದೆ. ನಿನ್ನೆವರೆಗೆ 2,053 ಕೊರೊನಾ ಕೇಸ್ ದಾಖಲಾಗಿತ್ತು. ಒಂದೇ ದಿನದಲ್ಲಿ ಕೇಸ್ ಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಆರೋಗ್ಯ ಇಲಾಖೆ ಹಾಗೂ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಸಿಕ್ಕಿದೆ.
ವಲಯವಾರು ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಹೀಗಿದೆ
ಬೆಂಗಳೂರು ಪೂರ್ವ ವಲಯ - 745
ಮಹಾದೇವ ಪುರ ವಲಯ - 717
ಬೊಮ್ಮನಹಳ್ಳಿ ವಲಯ - 412
ದಕ್ಷಿಣ ವಲಯ - 483
ಪಶ್ಚಿಮ ವಲಯ - 322
ಯಲಹಂಕ ವಲಯ - 232
ಆರ್ ಆರ್ ನಗರ- 199
ದಾಸರಹಳ್ಳಿ- 23
ಕೊರೊನಾ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮಂಗಳವಾರ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ. ಜನರ ಸಂಚಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಸರ್ಕಾರವು ಬೆಂಗಳೂರಿನ ಮೆಟ್ರೊ ರೈಲುಗಳಲ್ಲಿ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ನೀಡಿದೆ. ನಿಂತು ಪ್ರಯಾಣಿಸಲು ಅನುಮತಿ ಇರುವುದಿಲ್ಲ. ಈ ಕುರಿತು ಮೆಟ್ರೊ ನಿಗಮದಿಂದ ಅಧಿಕೃತ ಮಾಹಿತಿ ಪ್ರಕಟವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
PublicNext
05/01/2022 11:02 am