ಬೆಂಗಳೂರು: ನಗರದ ರಿಚ್ಮಂಡ್ ಸರ್ಕಲ್ ಬಳಿ ನಮ್ಮ ರಾಜ್ಯದ ಹೆಮ್ಮೆಯ ʼಗರುಡ ಫೋರ್ಸ್ʼ ಇಂದು ಫುಲ್ ರೌಂಡ್ಸ್ ನಿರತರಾಗಿದ್ರು. ರಿಚ್ಮಂಡ್ ಸಿಗ್ನಲ್ ಬಳಿ ʼಗರುಡʼ ಸಿಬ್ಬಂದಿ ಗನ್ ಹಿಡಿದು ಪೊಸಿಷನ್ ನಲ್ಲಿ ಇರುವುದನ್ನು ಕಂಡ ಸಿಟಿ ಜನ ಕೆಲಹೊತ್ತು ಆತಂಕಿತರಾಗಿದ್ದಂತೂ ಸುಳ್ಳಲ್ಲ! ರಿಚ್ಮಂಡ್ ರಸ್ತೆಯಲ್ಲಿನ ಹೋಟೆಲ್ ಒಂದರ ಒಳಗೆ ಆರ್ಮಿ ಅಧಿಕಾರಿಗಳು ಸೇರಿದಂತೆ ನಮ್ಮ ಗರುಡ ಪಡೆಯ 200ಕ್ಕೂ ಹೆಚ್ಚು ಸಿಬ್ಬಂದಿಯಿಂದ ಅಣಕು ಪ್ರದರ್ಶನ ನಡೆಯಿತು.
ಮಾಕ್ ಡ್ರಿಲ್ ನಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು, ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬ ಕುರಿತು ʼಗರುಡದಿಂದ ಅಣಕು ಪ್ರತಿದಾಳಿʼ ನಡೆಯಿತು. ರಿಚ್ಮಂಡ್ ಸರ್ಕಲ್ ಹಾಗೂ ಮಲ್ಯ ರಸ್ತೆಯಲ್ಲಿ ಪಡೆಯ ಸಿಬ್ಬಂದಿ ಗನ್ ಹಿಡಿದು ಒಂದೊಂದು ಆಂಗಲ್ ನಲ್ಲಿ ನಿಂತು, ಕುಳಿತು, ಮಲಗಿ...ಹೀಗೆ ಟೆರರಿಸ್ಟ್ ಗಳಿಗೆ ಕೌಂಟರ್ ಕೊಡಲು ಪೊಸಿಷನ್ ನಲ್ಲಿದ್ದರು. ಈ ಅಣಕು ಪ್ರದರ್ಶನದ ಬಗ್ಗೆ ಯಾವುದೂ ಗೊತ್ತಿಲ್ಲದ ಜನರು ನಗರದಲ್ಲಿ ಏನಾದರೂ ಸಂಭವಿಸಿರಬಹುದು ಎಂಬ ಆತಂಕ, ದುಗುಡದಿಂದಲೇ ಸಂಚರಿಸುತ್ತಿದ್ದರು.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
11/05/2022 09:39 pm