ಬೆಂಗಳೂರು: ನಾಗರಭಾವಿಯಲ್ಲಿರುವ ತೆರಿಗೆ ಭವನದಲ್ಲಿ ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಲ್ಲಿ ಕೆ.ಪಿ.ಎಸ್.ಸಿ.ಯಿಂದ ವಿವಿಧ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನ ಮತ್ತು ಇಂಡಿಯಾ ಫಾರ್ ಐಎಎಸ್ ಅಪ್ಲಿಕೇಷನ್ (APP) ಬಿಡುಗಡೆ ಸಮಾರಂಭ.
ಸಚಿವರಾದ ಡಾ||ಸಿ.ಎನ್.ಅಶ್ವಥ್ ನಾರಾಯಣ್* ರವರು ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಿರುವ ಇಂಡಿಯ ಫಾರ್ ಐ.ಎ.ಎಸ್. ಸಂಸ್ಥೆ ಉತ್ತಮ ಸಾಧನೆ ಮಾಡಿದೆ. ಸರ್ಕಾರದಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿರಬೇಕು,
ಅಧಿಕಾರಿಗಳನ್ನು ದೇವರಂತೆ ಜನ ಸಾಮಾನ್ಯರು ನೋಡುತ್ತಾರೆ.
ಐ.ಎ.ಎಸ್.ಮತ್ತು ಐ.ಎಫ್.ಎಸ್.ಹುದ್ದೆಗಳಲ್ಲಿ ಕನ್ನಡಿಗರು ಹೆಚ್ಚು ಆಯ್ಕೆಯಾಗಬೇಕು. ಸ್ಕೂಲ್,ಕಾಲೇಜು ಶಿಕ್ಷಣದಲ್ಲಿ ನೂತನ ನೀತಿ ತರಲಾಗಿದೆ. ವಿಷಯಗಳ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ ಇದು ದೇಶದಲ್ಲಿ ಕರ್ನಾಟಕ ಮೊದಲು. 3ಮಕ್ಕಳಿಂದ ಶಾಲಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ, 3ರಿಂದ12ವಯಸ್ಸಿನ ಒಳಗಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ, ಉನ್ನತ ಶಿಕ್ಷಣ ಬಹಳ ಸುಲಭವಾಗುತ್ತದೆ. ಕರ್ನಾಟಕದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ. ತಂದೆ,ತಾಯಿ ಮಗುವಿನ ಮೊದಲು ಗುರುವಾಗಿ ಸರಿಯಾದ ಮಾರ್ಗದರ್ಶನ ನೀಡಬೇಕು.
ಉತ್ತಮ ಶಿಕ್ಷಣ ಎಲ್ಲರಿಗೂ ಲಭಿಸಿದಾಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿರವರು ಮಾತನಾಡಿ ಶಿಕ್ಷಣ,ಕ್ರೀಡೆ, ರಾಜಕೀಯ ಕ್ಷೇತ್ರವಾಗಿರಬಹುದು ಗುರುವಿನ ಸಲಹೆ,ಮಾರ್ಗದರ್ಶನ ಸಿಕ್ಕರೆ ಉತ್ತಮ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಹುದ್ದೆ ಸಿಗಬೇಕಾದರೆ ಸಾಮಾನ್ಯವಲ್ಲ, ರಾಜ್ಯದಲ್ಲಿ 6ಲಕ್ಷದ 50ಹುದ್ದೆಗಳು ಖಾಲಿ ಇದೆ. ಸ್ಪರ್ಧಾತ್ಮಕ ಪ್ರಪಂಚವಿದೆ, ಬುದ್ದವಂತರಾಗಿ ಮಾತ್ರ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ.
ಐ.ಎ.ಎಸ್.ಮತ್ತು ಕೆ.ಎ.ಎಸ್.ಉನ್ನತ ಹುದ್ದೆಗಳಲ್ಲಿ ಕನ್ನಡಿಗರರಿಗೆ ಹೆಚ್ಚು ಆಯ್ಕೆಯಾಗಿ ಬರಬೇಕು. ಭಾರತರತ್ನ ಸರ್.ಎಂ.ವಿ.ರವರ ಸರಳ ಆಡಳಿತ ಆಳವಡಿಸಿಕೊಳ್ಳಬೇಕು, ಸರ್ಕಾರದ ಯಾವುದೇ ವಸ್ತು,ಅಧಿಕಾರವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಾಜ ಕಲ್ಯಾಣ ಇಲಾಖೆಯ ಯೋಜನೆ ತಲುಪಬೇಕು ಎಂದು ಹೇಳಿದರು.
Kshetra Samachara
19/09/2022 05:27 pm