ಯಲಹಂಕ: ಯುವಜನತೆಗೆ ಸೂಕ್ತ ವಿದ್ಯಾಭ್ಯಾಸ ದೊರೆತಾಗ ಸಮಾಜ ಸಮೃದ್ಧವಾಗ್ತದೆ. ಹೌದು ಯಲಹಂಕದ ರಾಜಾನುಕುಂಟೆಯಲ್ಲಿ ಸರ್ಕಾರ ಜ್ಞಾನಾರ್ಜನೆಗಾಗಿ ನೃಪತುಂಗ ವಿಶ್ವವಿದ್ಯಾಲಯ ನಿರ್ಮಿಸಲು 18ಎಕರೆ ಜಾಗ ಮಂಜೂರು ಮಾಡಿದೆ. ಬೆಂಗಳೂರು ಸೈನ್ಸ್ ಕಾಲೇಜ್ ಈಗ ನೃಪತುಂಗ ವಿಶ್ವಿದ್ಯಾಲಯ ಎಂಬ ಹೆಸರಿನೊಂದಿಗೆ ವಿದ್ಯಾಸೇವೆ ನೀಡುತ್ತಿದೆ. ಈಗ ರಾಜಾನುಕುಂಟೆಯ ಸರ್ಕಾರಿ ಪ್ರೌಢಶಾಲೆ & P.U. ಕಾಲೇಜಿಗೆ ಹೊಂದಿಕೊಂಡ 18ಎಕರೆ ಜಾಗ ನೀಡುತ್ತಿದ್ದೇವೆ. ನೃಪತುಂಗ ವಿ.ವಿ. ನಮ್ಮ ಭಾಗದ ಯುವಜನತೆಗೆ ವಿದ್ಯೆ- ಉದ್ಯೋಗ ನೀಡಿ ದಾರಿದೀಪವಾಗಲಿ ಎಂದು ಶಾಸಕ ವಿಶ್ವನಾಥ್ ತಿಳಿಸಿದರು.
ನೃಪತುಂಗ ವಿವಿ ಹಿಂದೆ 1921ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ P.U ಕಾಲೇಜ್ ಆಗಿ ಪ್ರಾರಂಭವಾಯ್ತು. ಮುಂದೆ 1951ರಲ್ಲಿ ಡಿಗ್ರಿ ಕಾಲೇಜ್ ಆಗಿ ಬೆಳೆದು GAS ಕಾಲೇಜ್ ಆಯಿತು. ನಂತರ 1971ರಲ್ಲಿ ಸರ್ಕಾರಿ ಕಲಾ & ವಿಜ್ಞಾನ ಕಾಲೇಜ್ ಹೆಸರಲ್ಲಿ ವಿದ್ಯಾಸೇವೆ ನೀಡುತ್ತಾ ಬಂದು, ಸರ್ಕಾರಿ ವಿಜ್ಞಾನ ಕಾಲೇಜ್ ಆಗಿ ಪ್ರತ್ಯೇಕ ಆಯ್ತು. ಈಗ ಕೇಂದ್ರ ಸರ್ಕಾರದ NAAC
ಪರಿವೀಕ್ಷಣೆಯಲ್ಲಿ ಉತ್ತಮ ವಿದ್ಯಾಸೇವೆಗೆ ಸರ್ಕಾರಿ ವಿಜ್ಞಾನ ಕಾಲೇಜು ವಿಶ್ವವಿದ್ಯಾಲಯ ಮಾನ್ಯತೆ ಪಡೆದಿದೆ. ಈಗ ಸ್ಯಾಟ್‌ಲೈಟ್ ಕ್ಯಾಂಪಸ್ ನಿರ್ಮಾಣಕ್ಕಾಗಿ ಸರ್ಕಾರ ಜಾಗ ನೀಡುತ್ತಿದೆ. ಯಲಹಂಕ ಭಾಗದಲ್ಲಿ ಉತ್ತಮ ವಿದ್ಯಾಸೇವೆ ನೀಡಿ ನೃಪತುಂಗ ವಿ.ವಿ. ಯುಜನತೆಗೆ ಉತ್ತಮ ವೇದಿಕೆ ಆಗಲಿದೆ ಎಂದು ಉಪಕುಲಪತಿ ಸಂತಸ ಹಂಚಿಕೊಂಡರು.
ವಿದ್ಯಾಬುದ್ದಿ ಇದ್ದರೆ ಬದುಕು ಯಶಸ್ಸಿನತ್ತ ಸಾಗುತ್ತದೆ. ಅಂತಹ ಸಮಾಜ ಕಟ್ಟುವ ಯುಜವ ಜನತೆಯ ಬದುಕು ಕಟ್ಟಿಕೊಳ್ಳುವ ವಿದ್ಯಾಸೇವೆನ ನೃಪತುಂಗ ವಿಶ್ವವಿದ್ಯಾಲಯ ಯಲಹಂಕದ ಜನತೆಗೆ ನೀಡಲಿ.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
21/07/2022 08:09 am