ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ಕಿರಿಕಿರಿ : ಪಿಯು ಸೈನ್ಸ್ ವಿಭಾಗದಲ್ಲಿ 8 ಮತ್ತು 10ನೇ ರ‍್ಯಾಂಕ್ ಪಡೆದ ಮುಸ್ಲಿಂ ವಿದ್ಯಾರ್ಥಿನಿಯರು

ದೊಡ್ಡಬಳ್ಳಾಪುರ : ದೇಶದ್ಯಾಂತ ನಡೆಯುತ್ತಿದ್ದ ಹಿಜಾಬ್ ವಿವಾದದಿಂದ ವಿದ್ಯಾರ್ಥಿನಿಯರು ಸಾಕಷ್ಟು ಗೊಂದಲದಲ್ಲಿದ್ದರು. ಈ ಗೊಂದಲ ಗೋಜಲುಗಳ ನಡುವೆಯು ಮುಸ್ಲಿಂ ವಿದ್ಯಾರ್ಥಿನಿಯರು ಅದ್ಭುತ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದಲ್ಲಿ 8 ಮತ್ತು 10 ರ‍್ಯಾಂಕ್ ಪಡೆಯುವ ಮೂಲಕ ಊರಿಗೂ ಮತ್ತು ಶಾಲೆಗೆ ಹೆಸರು ತಂದಿದ್ದಾರೆ.

ದೊಡ್ಡಬಳ್ಳಾಪುರ ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಇವರಲ್ಲಿ 80ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಸದ್ಯ ಪಿಯು ಫಲಿತಾಂಶದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ರ‍್ಯಾಂಕ್ ಪಡೆಯುವ ಮೂಲಕ ಕಾಲೇಜ್ ಗೆ ಹೆಸರು ತಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅಫಿಯಾ ಮಾರಿಯಮ್ 600ಕ್ಕೆ 590 ಅಂಕ ಗಳೊಂದಿಗೆ 8ನೇ ರ‍್ಯಾಂಕ್ ಪಡೆದಿದ್ದಾರೆ. ವಿಜ್ಞಾನ ವಿಭಾಗ ಪಿಸಿಎಂಬಿ ನಲ್ಲಿ ಸುಫಿಯಾ ಶಬ್ಬೀರ್ 600ಕ್ಕೆ 588 ಅಂಕಗಳೊಂದಿಗೆ 10 ನೇ ರ‍್ಯಾಂಕ್ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಝೈಬಾ ತರ್ರನಮ್ 600 ಕ್ಕೆ 586 ಪಡೆಯುವ ಟಾಫರ್ಸ್ ಗಳಾಗಿದ್ದಾರೆ. ಇವರೇಲ್ಲ ಮುಸ್ಲಿಂ ವಿದ್ಯಾರ್ಥಿನಿಯರಾಗಿದ್ದು. ಪರೀಕ್ಷೆ ಸಮಯದಲ್ಲಿ ಹಿಜಾಬ್ ವಿವಾದ ತಾರಕಕ್ಕೆರಿತ್ತು ಆದರೆ ಇದ್ಯಾವುದಕ್ಕೆ ಕಿವಿಗೊಡದ ಈ ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಿ ಅದ್ವೀತಿಯ ಸಾಧನೆ ಮಾಡಿದ್ದಾರೆ..

ರಾಜ್ಯದಲ್ಲಿ ವಿವಾದ ತಾರಕ್ಕೇರಿದ ಸಮಯದಲ್ಲಿ ದೊಡ್ಡಬಳ್ಳಾಪುರ ಜನತೆ ಇಂತಹ ವಿಷಯಗಳಿಗೆ ಮನ್ನಣೆ ನೀಡಲಿಲ್ಲ. ಕಾಲೇಜ್ ಆಡಳಿತ ಮತ್ತು ವಿದ್ಯಾರ್ಥಿಗಳ ಸಹ ಹಿಜಾಬ್ ಬಗ್ಗೆ ತಲೆ ಕೆಡಿಸಿಕೊಳ್ಳದೆ ವಿದ್ಯಾಭ್ಯಾಸಕ್ಕೆ ಮಾತ್ರ ಗಮನ ಕೊಟ್ಟರು. ವಿದ್ಯಾನಿಧಿ ಕಾಲೇಜ್ ನ ಮುಸ್ಲಿಂ ವಿದ್ಯಾರ್ಥಿನಿಯರು ಸರ್ಕಾರದ ಮಾನದಂಡದಂತೆ ನಡೆದುಕೊಂಡಿರುವುದು ಸಾಧನೆಗೆ ಕಾರಣವಾಗಿದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣುಡಿಯಂತೆ ಇಂದು ಹೆಣ್ಣು ಮಕ್ಕಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಆದರಲ್ಲೂ ಮುಸ್ಲಿಂ ಯುವತಿಯರು ವಿದ್ಯಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಹೊಸ ಭರವಸೆಯನ್ನ ಮೂಡಿಸಿದೆ.

Edited By : Shivu K
Kshetra Samachara

Kshetra Samachara

22/06/2022 12:46 pm

Cinque Terre

2.09 K

Cinque Terre

0

ಸಂಬಂಧಿತ ಸುದ್ದಿ