ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 33 ಪ್ರೌಢಶಾಲೆಗಳಿಲ್ಲಿn ಅತ್ಯನ್ನತ ಶ್ರೇಣಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿ ಗಳಿಗೆ 25 ಸಾವಿರ ಪ್ರೊತ್ಸಾಹ ಧನ ನೀಡಲು ಬಿಬಿಎಂಪಿ ನಿರ್ಧರಿಸಿದೆ.
2021-2ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 1,991 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ *1,419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 71 ರಷ್ಟು ಫಲಿತಾಂಶ ಬಂದಿದೆ.
ಅದರಂತೆ, ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 1,991 ವಿದ್ಯಾರ್ಥಿಗಳ ಪೈಕಿ 742 ಗಂಡು ಮಕ್ಕಳಲ್ಲಿ 41 ಹಾಗೂ 1,249 ಹೆಣ್ಣು ಮಕ್ಕಳಲ್ಲಿ 103 ವಿದ್ಯಾರ್ಥಿಗಳು ಸೇರಿದಂತೆ 144 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಈ ಪೈಕಿ ಬಿಬಿಎಂಪಿ ಶ್ರೀರಾಮಪುರ ಬಾಲಕಿಯರ ಪ್ರೌಢಶಾಲೆಗಳಲ್ಲಿ ಕು. ಉಜ್ವಲ.ಎಂ.ಸಿ ಎಂಬ ವಿದ್ಯಾರ್ಥಿನಿಯು 625ಕ್ಕೆ *616 ಅಂಕಗಳನ್ನು ಪಡೆದು ಪಾಲಿಕೆ ಪ್ರೌಢಶಾಲೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.
ಪಾಲಿಕೆಯ ಶಾಂತಿನಗರ ಪ್ರೌಢಶಾಲೆಯು ಶೇ. 100 ರಷ್ಟು ಫಲಿತಾಂಶವನ್ನು ನೀಡಿ ಮೊದಲ ಸ್ಥಾನ, ಭೈರವೇಶ್ವರ ನಗರ ಪ್ರೌಢ ಶಾಲೆಯು ಶೇ. 91.52 ರಷ್ಟು ಫಲಿತಾಂಶವನ್ನು ನೀಡಿ ಎರಡನೇ ಸ್ಥಾನ, ಹೇರೋಹಳ್ಳಿ ಪ್ರೌಢ ಶಾಲೆ ಯು ಶೇ. 90.12 ರಷ್ಟು ಫಲಿತಾಂಶ ವನ್ನು ನೀಡಿ ಮೂರನೇ ಸ್ಥಾನವನ್ನು ಪಡೆದಿರುತ್ತದೆ.
Kshetra Samachara
21/05/2022 02:00 pm