ಬೆಂಗಳೂರು: ಕಳೆದ 15 ವರ್ಷದಿಂದಲೇ ಸರ್ಕಾರಿ ಶಾಲೆಯ ಶಿಕ್ಷಕರು ಒಂದೇ ಕಡೆಗೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕುಟುಂಬದಿಂದಲೂ ದೂರವೇ ಉಳಿದಿದ್ದಾರೆ. ಈ ಕಾರಣಕ್ಕೇನೆ ನಮ್ಮನ್ನ ನಮ್ಮೂರಿಗೆ ವರ್ಗಾಯಿಸಿ ಅಂತಲೇ ಶಿಕ್ಷಕರು ಪ್ರತಿಭಟನೆ ಮಾಡುತ್ತಿದ್ದಾರೆ.
15 ವರ್ಷಗಳಿಂದ ಒಂದೇ ಊರಿನಲ್ಲಿ ಕೆಲಸ ಮಾಡಿದ್ದರಿಂದ ನಾವು ನಮ್ಮ ಕುಟುಂಬದಿಂದ ದೂರವಿದ್ದೇವೆ. ಹಾಗೂ ಇದು ನಮಗೆ ಕಷ್ಟಕರವಾಗಿದೆ. ನಮ್ಮನ್ನು ಊರಿಗೆ ವರ್ಗಾಯಿಸಿ ಇಲ್ಲವೇ ವಿಷ ಕುಡಿದು ಸಾಯುತ್ತೇವೆ ಎಂದು ಶಿಕ್ಷಕರು ಸರ್ಕಾರವನ್ನು ಎಚ್ಚರಿಸಿದ್ದಾರೆ..
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ನಡೆದ ಸರ್ಕಾರಿ ನೌಕರರ ಸಂಘದ ಪ್ರತಿಭಟನೆಯಲ್ಲಿ ನೂರಾರು ಸರ್ಕಾರಿ ಶಿಕ್ಷಕರು ಭಾಗಿಯಾಗಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು.
Kshetra Samachara
19/04/2022 02:37 pm