ಬೆಂಗಳೂರು: ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ SSLC ಪರೀಕ್ಷೆ ಅಟೆಂಡ್ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಆದರೆ ಈ ಬಾರಿ ಖುದ್ದು ಮಕ್ಕಳೇ ಪರೀಕ್ಷೆ ಬರೆದು ಪಾಸ್ ಆಗಬೇಕು. ಹೀಗಾಗಿ ಪರೀಕ್ಷೆ ಭಯ ಇದ್ಯಾ ಅಥವಾ ಈ ಬಾರಿ ಮಕ್ಕಳು ಪರೀಕ್ಷೆಯನ್ನು ಹೇಗೆ ಎದುರಿಸುತ್ತಿದ್ದಾರೆ ನೋಡೋಣ ಬನ್ನಿ.
ಮಕ್ಕಳು ಬಹಳ ವಿಶ್ವಾಸದಿಂದ ಪರೀಕ್ಷೆ ಬರೆಯಲು ಖುಷಿ ಇಂದ ಹೋಗುತ್ತಿದ್ದಾರೆ. ಹಿಜಾಬ್ ನಡುವೆಯು ಸರ್ಕಾರದ ರೂಲ್ಸ್ ಕರೆಕ್ಟ್ ನಾವು ಚೆನ್ನಾಗಿಯೆ ಓದುಕೊಂಡಿದ್ದೇವೆ ಎಂಬ ಮಾತುಗಳನ್ನ ಮಕ್ಕಳಿಂದ ಕೇಳ್ತಿದ್ರೆ ಬಹಳ ಸಂತೋಷವಾಗುತ್ತದೆ. ಇನ್ನೂ ಇಸ್ಲಾಮ ಸಮುದಾಯದ ಪೋಷಕರು ಮಕ್ಕಳ ಭವಿಷ್ಯವನ್ನ ತಲೆಯಲ್ಲಿಟ್ಟುಕೊಂಡು, ಖುದ್ದಾಗಿ ಹಿಜಾಬ್ ಹಾಕಿಸದೆ ಮಕ್ಕಳನ್ನು ಪರೀಕ್ಷಾ ಸೆಂಟರ್‌ಗಳಿಗೆ ಕರೆದುಕೊಂಡು ಬಂದು ಬಿಡುತ್ತಿದ್ದಾರೆ. ಹಿಜಾಬ್ ಹಾಕಿದ ವಿದ್ಯಾರ್ಥಿಗಳು ಗೇಟ್ ಹತ್ತಿವೇ ಹಿಜಾಬ್ ಬಿಚ್ಚಿ ಹೊಳಗಡೆ ಹೋಗುತ್ತಿದ್ದಾರೆ.
SSLC ಪರೀಕ್ಷೆಯು ಮಕ್ಕಳ ಭವಿಷ್ಯದ ಮುಖ್ಯ ಘಟ್ಟ. ಈ ಹಿನ್ನಲೆ ಸರಿಯಾದ ಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಈ ಬಗ್ಗೆ ನಮ್ಮ ರಿಪೋರ್ಟರ್ ರಂಜಿತ ಮಕ್ಕಳ ಹತ್ತಿರಾ ಚಿಟ್- ಚಾಟ್ ನಡೆಸಿದ್ದಾರೆ ನೋಡೋಣ ಬನ್ನಿ.
PublicNext
28/03/2022 10:46 am