ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಾಸಗಿ ಶಾಲೆಗೆ ಭೇಟಿ

ಭಾರತೀಯತೆ ನಮ್ಮದಾಗಬೇಕು.ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ತಾರತಮ್ಯ ಇರಬಾರದು. ನಾವೆಲ್ಲಾ ಭಾರತೀಯರು, ಶಾಲಾ-ಕಾಲೇಜುಗಳಲ್ಲಿ ಯಾವುದೇ ವಿವಾದ ಬೇಡ ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿಷಾದವನ್ನು ವ್ಯಕ್ತಪಡಿಸಿದರು.

ಸರ್ಜಾಪುರದ ಬಳಿ ಇರುವ ಗ್ರೀನ್‌ವುಡ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಒಳ್ಳೆಯದಲ್ಲ. ಧರ್ಮದ ಬಗ್ಗೆ ಗೌರವವಿರಲಿ. ಆದರೆ ಶಾಲಾ-ಕಾಲೇಜುಗಳಲ್ಲಿ ವಿವಾದ ಬೇಡ. ಶಾಲೆಗಳು ಮಾಡಿರುವ ಕ್ರಮಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಪ್ರತಿಯೊಂದು ಶಾಲಾ-ಕಾಲೇಜುಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆ ಹೊಂದಬೇಕು. ಇಡೀ ದೇಶದ ಶೈಕ್ಷಣಿಕ ಸಂಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಪರಿಸರ ಕಾಳಜಿ ರೇಡಿಯೋ ಹವಾಮಾನ ಸೇರಿದಂತೆ ಹಲವು ವಿಚಾರಗಳಿಗೆ ಒಳಪಡಿಸಬೇಕು. ನಾವು ಮೊದಲು ಭಾರತೀಯರು ಶಾಲೆಯಲ್ಲಿ ಯಾವುದೇ ಜಾತಿ ಮತ ಭಾಷೆ ಇಲ್ಲ. ಭಾರತೀಯತೆ ನಮ್ಮದಾಗಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು . ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜೊತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಾಥ್ ನೀಡಿದರು.

Edited By :
Kshetra Samachara

Kshetra Samachara

26/02/2022 06:05 pm

Cinque Terre

2.63 K

Cinque Terre

0

ಸಂಬಂಧಿತ ಸುದ್ದಿ