ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಹೀಗೊಂದು ಸರ್ಕಾರಿ ಬಾಲಕಿಯರ ಹಾಸ್ಟೆಲ್; ರೆಸಾರ್ಟ್ ಲುಕ್, ಫೈವ್ ಸ್ಟಾರ್ ಹೊಟೇಲ್ ಸೌಲಭ್ಯ!

ದೊಡ್ಡಬಳ್ಳಾಪುರ: ಬಾಲಕಿಯರ ಹಾಸ್ಟೆಲ್ ರೆಸಾರ್ಟ್ ನಂತೆ ಸಿಂಗಾರಗೊಂಡಿದೆ. ಇಲ್ಲಿನ ಸೌಲಭ್ಯ ಯಾವ ಫೈವ್ ಸ್ಟಾರ್ ಹೊಟೇಲ್ ಗೂ ಕಡಿಮೆ ಇಲ್ಲ! ಶ್ರೀಮಂತರು ತಮ್ಮ ಮಕ್ಕಳಿಗೂ ಇಂತಹ ವ್ಯವಸ್ಥೆ ಮಾಡಿರ್ತಾರೋ ಇಲ್ವೋ? ಆದರೆ, ಸರ್ಕಾರಿ ಬಾಲಕಿಯರ ಹಾಸ್ಟೆಲ್ ನಲ್ಲಿ ಬಡವಿದ್ಯಾರ್ಥಿನಿಯರು ಸಿರಿತನದ ಅನುಭವದೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಸರ್ಕಾರಿ ಹಾಸ್ಟೆಲ್ ಆಗಿದ್ರೂ ರೆಸಾರ್ಟ್ ನಂತೆ ಅಲಂಕೃತ. ರಾತ್ರಿ ವಿದ್ಯುತ್ ದೀಪಗಳಿಂದ ಜಗಮಗಿಸುವ ಕಟ್ಟಡ, ಮೆಟ್ಟಿಲು, ಕಿಟಕಿ ಮತ್ತು ಕಾರಿಡಾರ್ ನಲ್ಲಿ ಜೋಡಿಸಿಟ್ಟಿರುವ ಅಲಂಕಾರಿಕ ಗಿಡಗಳು. ಅವರಣದ ಕೈತೋಟ ಆಕರ್ಷಣೀಯ. ಸುರಕ್ಷತೆಗಾಗಿ ಕಟ್ಟಡ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ವಿಶ್ರಾಂತಿಗೆ ಉತ್ತಮ ಗುಣಮಟ್ಟದ ಹಾಸಿಗೆ- ದಿಂಬಿನ ವ್ಯವಸ್ಥೆಯಿದೆ. ಅಧ್ಯಯನಕ್ಕಾಗಿ ಸ್ಟಡಿ ರೂಮ್, ಕಂಪ್ಯೂಟರ್ , ಗ್ರಂಥಾಲಯವಿದೆ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ಎಣ್ಣೆ, ಶ್ಯಾಂಪೂ, ಸಾಬೂನು, ಟೂತ್ ಪೇಸ್ಟ್ ಲಭ್ಯ. ಬೆಳಗ್ಗಿನ ತಿಂಡಿ, ರಾತ್ರಿ ಊಟ ಜೊತೆಗೆ ಸ್ನ್ಯಾಕ್ಸ್, ಟೀ- ಕಾಫಿ, ಹಾರ್ಲಿಕ್ಸ್ ಸಹ ಕೊಡಲಾಗುತ್ತದೆ. ತಿಂಗಳಿಗೆ 2 ದಿನ ಚಿಕನ್, ಪ್ರತಿದಿನ ಮೊಟ್ಟೆ ನೀಡಲಾಗುತ್ತದೆ.

ಸಂಜೆ ನಂತರ ಶಿಕ್ಷಕರು ಟ್ಯೂಷನ್ ಕೊಡುತ್ತಾರೆ. ಈ ಹಾಸ್ಟೆಲ್ ಸೇರಿದ ನಂತರ ವಿದ್ಯಾರ್ಥಿನಿಯರಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಉತ್ತಮ ಅಂಕ ಗಳಿಸುತ್ತಿದ್ದಾರೆ. ಇದೇ ಹಾಸ್ಟೆಲ್ ನಲ್ಲಿದ್ದ ಬಾಲಕಿಯರು ಸರ್ಕಾರಿ ಉದ್ಯೋಗಿಗಳಾಗಿ ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ‌

Edited By : Shivu K
Kshetra Samachara

Kshetra Samachara

25/01/2022 10:09 am

Cinque Terre

754

Cinque Terre

0

ಸಂಬಂಧಿತ ಸುದ್ದಿ