ದೇವನಹಳ್ಳಿ: ಹಿಜಾಬ್ ಧರಿಸಿ ಕಾಲೇಜ್ ಗೆ ಬಂದಿದ್ದ ವಿದ್ಯಾರ್ಥಿಗಳನ್ನ ಕಾಲೇಜ್ ಹೊರಗೆ ನಿಲ್ಲಿಸಲಾಗಿತ್ತು. ಇದರಿಂದ ಅಕ್ರೋಶಗೊಂಡ ಪೋಷಕರು ತಮ್ಮ ಮಕ್ಕಳ ಭವಿಷ್ಯ ಹಾಳು ಮಾಡದಂತೆ ಕಾಲೇಜ್ ಆಡಳಿತ ಮಂಡಳಿ ವಿರುದ್ಧ ತಮ್ಮ ಅಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಪ್ರಗತಿ ಪದವಿ ಪೂರ್ವ ಕಾಲೇಜ್ ನಲ್ಲಿ ಘಟನೆ ನಡೆದಿದ್ದು, ಇಂದು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನ ಕಾಲೇಜ್ ಆಡಳಿತ ಮಂಡಳಿ ಕಾಲೇಜ್‌ನಿಂದ ಹೊರಗಡೆ ನಿಲ್ಲಿಸಿತ್ತು. ಇದರಿಂದ ಅಕ್ರೋಶಗೊಂಡ ಪೋಷಕರು ಕಾಲೇಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಓದಿಲ್ಲ ಆದರೂ ಮಕ್ಕಳು ಭವಿಷ್ಯದ ಕಾರಣಕ್ಕೆ ಕಾಲೇಜ್ ಗೆ ಕಳಿಸಲಾಗುತ್ತಿದೆ. ಹುಟ್ಟಿದಾಗಿನಿಂದಲೂ ಹಿಜಾಬ್ ಧರಿಸಿಯೇ ನಮ್ಮ ಮಕ್ಕಳನ್ನ ಶಾಲಾ ಕಾಲೇಜ್ ಗೆ ಕಳಿಸುತ್ತಿದ್ದೇವೆ. ಅವಾಗ ಇಲ್ಲದ ಕಾನೂನು ಇವಾಗ ಏಕೆ ಬಂತು ಅಂತಾ ಪೋಷಕರು ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಪೋಷಕರ ಮನವೊಲೈಸಿದ ಪೊಲೀಸರು ಮತ್ತು ಆಡಳಿತ ಮಂಡಳಿ ಹಿಜಾಬ್ ತೆಗೆಸುವಲ್ಲಿ ಯಶಸ್ವಿಯಾದರು. ನಂತರ ತರಗತಿ ಒಳಗೆ ವಿದ್ಯಾರ್ಥಿನಿಯರು ತೆರಳಿದರು.
Kshetra Samachara
17/02/2022 06:56 pm