ಆನೇಕಲ್: ತಾಲೂಕಿನ ಹೆಬ್ಬಗೊಡಿ ಸಮೀಪದ ಗೊಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂದು ಶಕ್ತಿ ಕೇಂದ್ರದ ವತಿಯಿಂದ ಮಕ್ಕಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು.
ಇನ್ನು ಇದೇ ವೇಳೆ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಮುನಿರಾಜೇಗೌಡ ಮಾತನಾಡಿ ಸರ್ಕಾರಿ ಸರ್ಕಾರಿ ಶಾಲೆಗೆ ಬರುವಂತ ಮಕ್ಕಳು ಬಡತನದ ಮಕ್ಕಳು ಅವರಿಗೆ ಈ ರೀತಿಯಾದ ಒಂದು ಪ್ರೋತ್ಸಾಹ ಸಿಗುವ ನಿಟ್ಟಿನಲ್ಲಿ ವಿತರಣೆ ಮಾಡಿದ್ದೇವೆ ಮತ್ತು ಸರ್ಕಾರಿ ಶಾಲೆಯ ಮಕ್ಕಳು ಅತಿ ಹೆಚ್ಚು ಬುದ್ಧಿವಂತರು ಸಮಾಜಕ್ಕೆ ಕೊಡುಗೆ ಕೊಡುವಂತವರು ಸರ್ಕಾರಿ ಶಾಲೆಯ ಮಕ್ಕಳೇ ಎಂದು ತಿಳಿಸಿದರು..
ಇದೇ ವೇಳೆ ಹುಳಹಳ್ಳಿ ಶ್ರೀನಿವಾಸ ಮಾತನಾಡಿ ರಾಜ್ಯಕ್ಕೆ ಮತ್ತು ಸಮಾಜಕ್ಕೆ ಮಕ್ಕಳು ಒಳ್ಳೆಯ ಸೇವೆ ಮಾಡಲಿ ಸರ್ಕಾರಿ ಶಾಲೆಯ ಮಕ್ಕಳೇ ಒಳ್ಳೆ ನಡತೆ ಮತ್ತು ಗುಣದಿಂದ ಬದುಕೋದು ಎಂದು ತಿಳಿಸಿದರು.
ಇನ್ನು ಹೆಬ್ಬಗೋಡಿ ನಗರಸಭೆ ಸದಸ್ಯ ನಾರಾಯಣಸ್ವಾಮಿ ಮಾತನಾಡಿ ಸರ್ಕಾರಿ ಶಾಲೆಗೆ ಒಂದು ಸಣ್ಣ ಸೇವೆ ಮಾಡುವುದಕ್ಕೆ ಒಂದು ಅವಕಾಶ ಕೊಟ್ಟಿರುವುದು ಖುಷಿ ವಿಚಾರ ಹಾಗಾಗಿ ಸರ್ಕಾರಿ ಶಾಲೆಯ ಏಳನೇ ಕ್ಲಾಸ್ ತರಗತಿ ಮಕ್ಕಳಿಗೆ ಉಚಿತವಾಗಿ ಬ್ಯಾಕ್ ಕೊಟ್ಟಿರೋದು ಕೃಷಿ ತಂದಿದೆ ಮಕ್ಕಳು ಚೆನ್ನಾಗಿ ಓದಲಿ ಅನ್ನೋದು ನನ್ನ ಆಶಯ ಅಂತ ತಿಳಿಸಿದರು ಇನ್ನು ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು.
Kshetra Samachara
30/09/2022 05:29 pm