ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ನುರಿತ ಶಿಕ್ಷಕರಿಂದ ಬೋಧನೆ ಮಾಡುವುದರ ಮೂಲಕ ಉತ್ಸಾಹವನ್ನು ತುಂಬಿದ್ದಾರೆ. ಮಾತ್ರವಲ್ಲದೆ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ಹಾಲಿನ ಡೈರಿ ಮುಂಭಾಗ ಇರುವ ಶ್ರೀವಾಣಿ ಕೋಚಿಂಗ್ ಸೆಂಟರ್ ನಲ್ಲಿ ಏರ್ಪಡಿಸಲಾಗಿತ್ತು..
ಇನ್ನು ತಿಮ್ಮರಾಯಸ್ವಾಮಿ ಶಾಲೆಯ ಶಿಕ್ಷಕರಾದ ವಾಸು,ಸರಸ್ವತಿ ವಿದ್ಯಾಮಂದಿರಾದ ಹೆಚ್.ಎಂ.ಭಾಗ್ಯ, ಶ್ರೀವಾಣಿ ಕಾಲೇಜಿನ ಚಂದ್ರಶೇಖರ್, ಆನೇಕಲ್ ಪಬ್ಲಿಕ್ ಶಾಲೆಯ ನಾಗವೇಣಿ ಇನ್ನೂ ಅನೇಕ ಉತ್ತಮ ಶಿಕ್ಷಕರಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ರಾಜಲಾಂಛ ಸಂಸ್ಥೆಯ ಜಿಗಣಿ ಘಟಕದಿಂದ ನೀಡಲಾಗಿದೆ..
ತೆಲಗರಹಳ್ಳಿ ಗಣೇಶ್ ರವರ ತಂಡದ ವತಿಯಿಂದ ಸರ್ಕಲ್ ಇನ್ಸ್ ಪೆಕ್ಟರ್ ಎಲ್.ವೈ .ರಾಜೇಶ್ ರವರ ಮಾರ್ಗದರ್ಶನದಲ್ಲಿ ಆನೇಕಲ್ ಇನ್ಸ್ ಪೆಕ್ಟರ್ ಮಹಾನಂದ ಮುಖ್ಯ ಅತಿಥಿಗಳಾಗಿ ಬಂದಿದ್ದರು.
PublicNext
25/06/2022 07:47 pm