ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಮರು ಮೌಲ್ಯ ಮಾಪನದಲ್ಲಿ ಸಿಕ್ತು 625 ಅಂಕಗಳು ನೇಕಾರನ ಮಗಳು ತಾಲ್ಲೂಕಿಗೆ ಟಾಫರ್

ದೊಡ್ಡಬಳ್ಳಾಪುರ: ನೇಕಾರನ ಮಗಳು ಅಂಕಗಳ ನೇಯ್ಗೆ ಮಾಡುವ ಮೂಲಕ ಶಾಲೆಗೆ ಮತ್ತು ಹೆತ್ತವರಿಗೆ ಗೌರವ ತಂದಿದ್ದಾಳೆ. SSLC ಪರೀಕ್ಷಾ ಫಲಿತಾಂಶದಲ್ಲಿ ಆಕೆ ಗಳಿಸಿದ್ದು 625 ಕ್ಕೆ 621 ಅಂಕಗಳು, ಆದರೆ ಆಕೆಗೆ ಆಚಲ ವಿಶ್ವಾಸ 625 ಅಂಕಗಳು ಬರಬೇಕಿತ್ತು ಎಂಬುದು, ಮರು ಮೌಲ್ಯ ಮಾಪನಕ್ಕೆ ಹಾಕಿದ್ದಾಗ ಆಕೆಯ ವಿಶ್ವಾಸ ಸುಳ್ಳಾಗಲಿಲ್ಲ 625 ಗರಿಷ್ಠ ಅಂಕ ಪಡೆದು ತಾಲೂಕಿಗೆ ಟಾಫರ್ ವಿದ್ಯಾರ್ಥಿಯಾಗಿದ್ದಾಳೆ

ದೊಡ್ಡಬಳ್ಳಾಪುರ ತಾಲೂಕಿನ ಸಹ್ಯಾದ್ರಿ‌ ಎಜುಕೇಶನ್ ಟ್ರಸ್ಟಿನ ಜ್ಞಾನಗಂಗಾ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಹನಾ 625 ಅಂಕ ಸಾಧನೆ ಮಾಡಿದ ವಿದ್ಯಾರ್ಥಿನಿ. ಈಕೆಯ ಜೊತೆಗೆ ತಾಲೂಕಿನ ಸರಸ್ವತಿ ಶಾಲೆಯ ರಿಜ್ವಾನ್ ಪಾಷ ಹಾಗೂ ಮೆಳೆಕೋಟೆ ಬಿಜಿಎಸ್ ಶಾಲೆಯ ಎನ್. ಹರ್ಷಿತಾ 625ಕ್ಕೆ 625 ಅಂಕ ಗಳಿಸಿಟಾಪರ್ ಗಳಾಗಿ ಹೊರಹೊಮ್ಮಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಹನಾ ಒಟ್ಟು 621 ಅಂಕ ಗಳಿಸಿದ್ದರು. ಇಂಗ್ಲಿಷ್ ಮತ್ತು ಸಮಾಜ ವಿಜ್ಞಾನದಲ್ಲಿ 100ಕ್ಕೆ ತಲಾ‌ 98 ಅಂಕ ಬಂದಿತ್ತು. ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ಹಾಗೂ ಸಮಾಜ‌ ವಿಜ್ಞಾನದಲ್ಲಿ‌ ಹೆಚ್ಚುವರಿಯಾಗಿ ತಲಾ‌ ಎರಡು ಅಂಕ ಪಡೆಯುವುದರೊಂದಿಗೆ 625ಕ್ಕೆ 625 ಅಂಕ ಪಡೆದಿದ್ದಾರೆ.ಅದೇ ರೀತಿ ಜ್ಣಾನಗಂಗಾ ಶಾಲೆಯ‌ ಮತ್ತೊಬ್ಬ ವಿದ್ಯಾರ್ಥಿನಿ‌ ಬಿಂದು ಅವರಿಗೆ ಮರುಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕ ಬಂದಿದೆ. ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನ ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಟಾಫರ್ ಸಹನಾ ತನ್ನ ಅಂಕಗಳಿಕೆಯ ಸಾಧನೆ ಬಗ್ಗೆ ಮಾತನಾಡಿದ ಅವರು ತರಗತಿಗಳಲ್ಲಿ‌ ಅಂದಿನ ಪಾಠಗಳನ್ನು ಅಂದೇ ಮನನ ಮಾಡುತ್ತಿದ್ದೆ. ಯಾವುದೇ ಟ್ಯೂಷನ್ ಗೆ ಹೋಗಿರಲಿಲ್ಲ. ನಿತ್ಯ ಆರು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಹಾಗಾಗಿ ಪರೀಕ್ಷೆ ಕಷ್ಟವಾಗಿರಲಿಲ್ಲ. ಆದರೆ, ಫಲಿತಾಂಶದಲ್ಲಿ‌ 621 ಅಂಕ ಬಂದಿತ್ತು. ನಾನು‌ ಬರೆದಿರುವ ಸರಿ ಉತ್ತರಗಳನ್ನು ಶಿಕ್ಷಕರಿಗೆ ಹೇಳಿದೆ.‌ ಮರು ಮೌಲ್ಯಮಾಪನಕ್ಕೆ ಅರ್ಜಿ‌ ಸಲ್ಲಿಸಲಾಯಿತು. ನಾನಂದುಕೊಂಡಂತೆ‌ ಎಲ್ಲ ವಿಷಯಗಳಲ್ಲಿ ಪ್ರತಿಶತ ಅಂಕ ಬಂದಿತು. ಫಲಿತಾಂಶ ಖುಷಿ‌ ಕೊಟ್ಟಿದೆ‌. ಮುಂದೆ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ, ವೈದ್ಯಕೀಯ ಕೋರ್ಸ್ ಮಾಡುವ ಆಸೆ ಇದೆ ತಮ್ಮ ಸಂತಸ ಹಂಚಿಕೊಂಡರು.

ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಯಾಗ ಬಾರದು, ವಿದ್ಯೆಯ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಆದರ್ಶ ಪ್ರಜೆಯಾಗಬೇಕು ಅನ್ನೋದು ನಮ್ಮ ಆಶಯ

Edited By : Somashekar
Kshetra Samachara

Kshetra Samachara

09/06/2022 07:17 pm

Cinque Terre

7.34 K

Cinque Terre

0

ಸಂಬಂಧಿತ ಸುದ್ದಿ