ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರ್ವಜನಿಕ ಶಿಕ್ಷಣ ಇಲಾಖೆಯ ಆದೇಶ ದ್ವಂದ್ವವಾಗಿದೆ: ಲೋಕೇಶ್ ತಾಳಿಕಟ್ಟೆ ಆರೋಪ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ ಎಂದು ಖಾಸಗಿ ಶಾಲಾ ಒಕ್ಕೂಟದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಕಿಡಿಕಾರಿದ್ದಾರೆ.ಶೈಕ್ಷಣಿಕ ವರ್ಷಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ದಿನಾಂಕ 19/7/22ರಂದು ಸುತ್ತೋಲೆ ಹೊರಡಿಸಿ ಹೊಸ ಶಾಲೆಗಳನ್ನು ಪ್ರಾರಂಭಿಸಲು ಅಥವಾ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಹೆಚ್ಚುವರಿ ವಿಭಾಗಗಳನ್ನು ಹೊಂದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 25/7/22 ಕೊನೆಯ ದಿನಾಂಕ ಎಂದು ಪ್ರಕಟಿಸಿದೆ.

ಇನ್ನು ಇಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿದೆ. ಅದರಲ್ಲಿ 2022-23 ರ ಶೈಕ್ಷಣಿಕ ವರ್ಷದ ಮಾನ್ಯತೆ ನೀಡುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಇನ್ನು ಮಾನ್ಯತೆ ಇಲ್ಲದ ಶಾಲೆಗಳನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವ ಶಾಲೆಗಳೆಂದು, ಪರಿಗಣಿಸಿ ಅಂತಹ ಶಾಲೆಗಳ ಹೆಸರುಗಳನ್ನು ಬಿಇಓ ಕಚೇರಿಗಳ ನೋಟಿಸ್ ಬೋರ್ಡ್ ನಲ್ಲಿ ಪ್ರಚಾರ ನೀಡಬೇಕೆಂದು ನಿರ್ದೇಶಸಲಾಗಿದೆ. ಇನ್ನು ಇದೆಲ್ಲ ಇಲಾಖೆಯ ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವು ಎಂದು ಲೋಕೇಶ್ ತಾಳೆಕಟ್ಟೆ ಅಸಾಮಾಧಾನ ಹೊರಹಾಕ್ತಿದ್ದಾರೆ.

Edited By : Nagaraj Tulugeri
PublicNext

PublicNext

21/07/2022 09:07 pm

Cinque Terre

19.2 K

Cinque Terre

1

ಸಂಬಂಧಿತ ಸುದ್ದಿ