ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಯುಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್

ದೇವನಹಳ್ಳಿ : ರಷ್ಯಾ ಮತ್ತು ಯುಕ್ರೇನ್ ನಡುವೆ ಎರಡು ವಾರಗಳಿಂದ ನಡೆಯುತ್ತಿರುವ ಯುದ್ಧದಿಂದ ಭಾರತ ಮತ್ತು ಕರ್ನಾಟಕದ ವಿದ್ಯಾರ್ಥಿಗಳು ಕಂಗಾಲಾಗಿದ್ದರು.

ವಿದ್ಯಾಭ್ಯಾಸಕ್ಕಾಗಿ ತೆರಳಿ ಸ್ವದೇಶಕ್ಕೆ ಸುರಕ್ಷಿತ ವಾಪಸ್ಸಾತಿಗೆ ಕೇಂದ್ರ ಸರ್ಕಾರ ಅವಿರತ ಪ್ರಯತ್ನ ನಡೆಸಿದೆ. ಮಾ.10 ರಂದು ದೆಹಲಿಗೆ ಬಂದು, ಇಂದು ದೆಹಲಿಯಿಂದ ಅಕ್ಷರ್, ಶ್ರೀಜಾ, ಶ್ರೀಮ ಮತ್ತು ಸ್ನೇಹ ಎಂಬ ನಾಲ್ಕು ಜನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ವಿದ್ಯಾರ್ಥಿಗಳನ್ನು ಪೋಷಕರು ಪ್ರೀತಿಯಿಂದ ಬರಮಾಡಿಕೊಂಡರು.

ಯುಕ್ರೇನ್ ನ ಸುಮಿ ಪ್ರಾಂತ್ಯದಲ್ಲಿ ಭಾರತದ 600 ಜನ ವಿದ್ಯಾರ್ಥಿಗಳಿದ್ರು. ಕಿವ್ ಹಾಗೂ ಖಾರ್ಕಿವ್ ನಲ್ಲಿ ಯುದ್ದ ತೀವ್ರವಾಗಿದ್ದು, ಅದು ಸುಮಿ ಪಟ್ಟಣಕ್ಕೂ ಆವರಿಸಿತ್ತು.

ಸುಮಿಯ ಕೆಲ ಪ್ರಾಂತ್ಯಗಳಲ್ಲೂ ಬಾಂಬಿಂಗ್ ಆಗಿದೆ. ಸುಮಿ ಯುನಿವರ್ಸಿಟಿಲಿ ನಾವಿದ್ವಿ, ದಿನಕಳೆದಂತೆ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ಉಂಟಾಯ್ತು. ಪೋಲೆಂಡ್ ಗೆ ತೆರಳಿ ಅಲ್ಲಿಂದ ಎಂಬೆಸಿ ಸಹಕಾರದಿಂದ ಭಾರತ ತಲುಪಿದ್ದೇವೆ, ತುಂಬಾನೆ ಖುಷಿಯಾಗ್ತಿದೆ. ಎಂದು ವಿಮಾನ ನಿಲ್ದಾಣದಲ್ಲಿ ಶ್ರೀಯಾ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

11/03/2022 04:59 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ