ಬೆಂಗಳೂರು: ಮಕ್ಕಳ ಹಿತದೃಷ್ಟಿಯಿಂದ ಹಿಂದಿನ ನಿಯಮ ಮುಂದೂವರಿಸಿಕೊಂಡು ಹೋಗ್ತಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಕಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಬೆಂಗಳೂರಿನಲ್ಲಿ ಶಾಲೆ ತೆರೆಯಲು ಹಿಂದೇಟು ಹಾಕುತ್ತಿರೋದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚೋ ವ್ಯವಸ್ಥೆ ಸರ್ಕಾರ ಪರೋಕ್ಷವಾಗಿ ಕಾರಣ ಆಗ್ತಿದೆ.ಇನ್ನೊಂದು ವಾರಗಳ ಸಮಯವನ್ನು ಸರ್ಕಾರ ನೀಡಿದ್ದು, ಅಲ್ಲಿಯವರೆಗೂ ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.
ಜ.29 ರಂದು ಮತ್ತೊಮ್ಮೆ ಸಭೆಯನ್ನು ನಡೆಸಲಿರುವ ಶಿಕ್ಷಣ ಇಲಾಖೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸದ್ಯ ಬೆಂಗಳೂರಿನಲ್ಲಿ 1 ರಿಂದ 9 ನೇ ತರಗತಿವರೆಗೆ ಶಾಲೆ ತೆರೆಯದಿರಲು ತೀರ್ಮಾನ ತೆಗೆದುಕೊಂಡಿದೆ.ಎಸ್ ಎಸ್ ಎಲ್ ಸಿ ,ಪಿಯುಸಿ, ಎಂಜನಿಯರಿಂಗ್, ವೈದ್ಯಕೀಯ,ದಂತ ವೈದ್ಯಕೀಯ ಕ್ಲಾಸ್ ಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ.
Kshetra Samachara
22/01/2022 10:26 am