ಬೆಂಗಳೂರು: ಹಬ್ಬ, ನೃತ್ಯ, ಸಂಭ್ರಮ ಸಡಗರಕ್ಕೆ ಮಕ್ಕಳು, ಪೋಷಕರು ವಯಸ್ಕರು, ಹಿರಿಯರು ಕಿರಿಯರು ಎಂಬ ವಯಸ್ಸಿನ ಬೇಧವಿಲ್ಲ. ಹೌದು ಯಲಹಂಕ ಉಪನಗರದ 'ಸ್ಟೆಪ್ ವಿತ್ ಮೀ' ನೃತ್ಯ ಶಾಲೆಯಲ್ಲಿ ಪೋಷಕರು ಮತ್ತು ಮಕ್ಕಳಿಗಾಗಿ ರಾಧಾಕೃಷ್ಣ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತಾಯಂದಿರು ಮತ್ತು ಮಕ್ಕಳು ರಾಧೆ ಮತ್ತು ಕೃಷ್ಣೆಯರಾಗಿ ಧಿರಿಸು ಹಾಕಿಕೊಂಡು ಮಾಡಿದ ನೃತ್ಯ ಮನ ಮೋಹಕವಾಗಿತ್ತು. ಮಕ್ಕಳ ಸಂಭ್ರಮಕ್ಕೆ ಮೀತಿಯೇ ಇರಲಿಲ್ಲ.
ಈಗಿನ ಆಧುನಿಕ ಕಾಲದಲ್ಲಿ ಎಲ್ಲರೂ ಬ್ಯುಸಿ. ಕಳೆದ ಎರಡೂ ವರ್ಷ ಕೊರೊನಾ ಸಂಕಷ್ಟದ ದಿನಗಳಲ್ಲಿ ಪೋಷಕರು, ಮಕ್ಕಳು ಮತ್ತು ಮನೆಯವರಿಗೆ ಯಾವುದೇ ಮನರಂಜನೆ ಇಲ್ಲದೇ ಎಲ್ಲರೂ ಜಡ್ಡುಕಟ್ಟಿದ್ದರು. ಈ ವೇಳೆ ಯಲಹಂಕ ಉಪನಗರ ಶರಾವತಿ ಬಳಿಯ ನೃತ್ಯಶಾಲೆಯ ಕೃಷ್ಣಜನ್ಮಾಷ್ಠಮಿ ನೃತ್ಯಸ್ಪರ್ದೆ ಅತ್ಯದ್ಭುತವಾಗಿ ಮೂಡಿಬಂತು. ಕೃಷ್ಣ ಮತ್ತು ರಾಧೆ ವೇಷಧಾರಿ ಮಕ್ಕಳು ಮತ್ತು ಪೋಷಕರು ನೃತ್ಯ ತುಂಬಾನೆ ಚೆನ್ನಾಗಿತ್ತು. ರಾಧೆ ಮತ್ತು ಕೃಷ್ಣ ಪಾತ್ರಧಾರಿಗಳು ಕಾಸ್ಟ್ಯೂಮ್ಸ್ ಸಹ ನೃತ್ಯ ಸ್ಪರ್ಧೆಯಲ್ಲಿ ಹೆಚ್ಚು ಕಣ್ಮನ ಸೆಳೆಯಿತು. ಪೋಷಕರ ಖುಷಿಗೆ ಪಾರವೇ ಇರಲಿಲ್ಲ.
ಕೃಷ್ಣಜನ್ಮಾಷ್ಠಮಿ ಹಬ್ಬದಲ್ಲಿ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚು ಸಡಗರ ಸಂಭ್ರಮ. ಮಕ್ಕಳ ತಯಾರಿ ಜೊತೆ ತಾವು ಸಹ ಅಚ್ಚುಕಟ್ಟಾಗಿ ತಯಾರಾಗಿ ಮಕ್ಕಳೇ ನಾಚುವಂತೆ ಸಿದ್ದರಾಗಿ ನೃತ್ಯಶಾಲೆಯ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
Kshetra Samachara
27/08/2022 09:21 am