ಬೆಂಗಳೂರು- ಮುಸಲ್ಮಾನರ ಪವಿತ್ರ ಹಬ್ಬ ಮೊಹರಂ ಸಂಭ್ರಮ. ದೇಶದೆಲ್ಲೆಡೆ ಮುಸ್ಲಿಂ ಬಾಂಧವರು ತ್ಯಾಗ, ಬಲಿದಾನದ ಸಂಕೇತದ ಪ್ರತೀಕವಾಗಿ ಈ ಹಬ್ಬ ಆಚರಿಸಿದ್ದಾರೆ.
ರಂಜಾನ್ ನಂತರ ಮೊಹರಂನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಮೊಹರಂ ಇಸ್ಲಾಂನಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದು ಸಹ ಒಂದು.
ಹಿಂದೂ-ಮುಸ್ಲಿಮರ ಭಾವೈಕ್ಯತೆ ಸಾರುವ ಹಬ್ಬ ಮೊಹರಂ, ಯಾವುದೇ ತಾರತಮ್ಯವಿಲ್ಲದೆ ಸರ್ವಧರ್ಮೀಯರು ಪಾಲ್ಗೊಂಡು ಹಬ್ಬ ಆಚರಿಸುತ್ತಾರೆ. ಹೀಗೆ ನಿನ್ನೆ ಸಿಲಿಕಾನ್ ಸಿಟಿಯ ಹಲವು ಕಡೆಗಳಲ್ಲಿ ಮುಸ್ಲಿಂ ಪವಿತ್ರ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
Kshetra Samachara
10/08/2022 06:26 pm