ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಮನೆದೇವರು ಶ್ರೀ ವೇಣುಗೋಪಾಲ ಸ್ವಾಮಿ ರಥದ ಪುರ ಪ್ರವೇಶ

ಯಲಹಂಕ: ಯಲಹಂಕದ ಕೋಟೆ ಬೀದಿಯ ಶ್ರೀವೇಣುಗೋಪಾಲಸ್ವಾಮಿ ಮತ್ತು ವಿಶ್ವನಾಥೇಶ್ವರ ದೇವಸ್ಥಾನಕ್ಕೆ ಸೇರಿದ ರಥವು ಇಂದು ಪುರ ಪ್ರವೇಶಿಸಿದೆ. ಶ್ರೀ ವೇಣುಗೋಪಾಲಸ್ವಾಮಿಯ ನೂತನ ಬ್ರಹ್ಮರಥವು ಭಕ್ತಾದಿಗಳ ಸಹಕಾರದಿಂದ ಪುರ ಪ್ರವೇಶಿಸಿದೆ.

ಉಡುಪಿ ಜಿಲ್ಲೆ ಕುಂದಾಪುರದ ಕೋಟೇಶ್ವರ ಎಂಬಲ್ಲಿ ನೂತನ ರಥದ ನಿರ್ಮಾಣ ಮಾಡಲಾಗಿದೆ. ಬಳಕೆಗೆ ಸಿದ್ಧವಾದ ಈ ರಥವನ್ನು ಯಲಹಂಕಕ್ಕೆ ಕರೆತರಲಾಗಿದೆ. ಬೆಳಗ್ಗೆ BEL ಸರ್ಕಲ್‌ನಿಂದ ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಅಟ್ಟೂರು, ಡೈರಿಕ್ರಾಸ್ ಸರ್ಕಲ್‌ಗಳ ಮೂಲಕ ರಥವನ್ನು ಯಲಹಂಕ ರೈತಸಂತೆ ಬಳಿ ಪುರಕ್ಕೆ ಪ್ರವೇಶಿಸಿ ಕರೆತರಲಾಯ್ತು.

ಯಲಹಂಕ ನಾಡಿನ ನಾಡಪ್ರಭುಗಳ ಆಳ್ವಿಕೆಯ ಬಗ್ಗೆ ಚೋಳರ ಕಾಲದ ಶಾಸನ ದೇವಸ್ಥಾನದಲ್ಲಿದೆ. ಇದೇ ದೇವರಿಗೆ ಕೆಂಪೇಗೌಡ ಮನೆತನವೂ ಪೂಜೆ ಸಲ್ಲಿಸಿಕೊಂಡು ಬರುತ್ತಿತ್ತು ಎನ್ನುವುದು ಇತಿಹಾಸದ ದಾಖಲೆಯಾಗಿದೆ..

ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Nagesh Gaonkar
PublicNext

PublicNext

13/03/2022 04:24 pm

Cinque Terre

41.19 K

Cinque Terre

0

ಸಂಬಂಧಿತ ಸುದ್ದಿ