ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ ವಾರ್ಡಿನ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಶ್ರೀ ಆದಿತ್ಯಾದಿ ನವಗ್ರಹ ಬಿಂಬ ಸ್ಥಿರ ಪ್ರತಿಷ್ಠಾನ ಹಾಗೂ ರಾಜಗೋಪುರ ಕುಂಭಾಭಿಷೇಕದ ಪೂಜೆಯನ್ನು ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಜಯೇಂದ್ರಪುರಿ ಮಹಾಸ್ವಾಮಿ, ಮಾನ್ಯ ಕಂದಾಯ ಸಚಿವರಾದ ಆರ್. ಅಶೋಕ್ ಮತ್ತು ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಗ್ರಾಮಸ್ಥರೊಡನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಹನುಮಂತಯ್ಯ, ಕೆ. ರಮೇಶ್ ರಾಜು, ಮುಖಂಡರಾದ ವಿಜಯ್ ಕುಮಾರ್, ಕ್ಷೇತ್ರದ ಮುಖಂಡರು, ಪದಾಧಿಕಾರಿಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
24/06/2022 08:38 pm