ಆನೇಕಲ್:ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘ ಆನೇಕಲ್ ಶಿಬಿರ ಕಚೇರಿಯಲ್ಲಿ ಇಂದು ಪ್ರಾದೇಶಿಕ ಸಭೆಯನ್ನು ಏರ್ಪಡಿಸಲಾಗಿತ್ತು ಇನ್ನು ಈ ಪ್ರಾದೇಶಿಕ ಸಭೆಯಲ್ಲಿ 152ಕ್ಕೂ ಹೆಚ್ಚು ಅಧ್ಯಕ್ಷರು (ಹಾಲು ಉತ್ಪಾದಕರ ಸಂಘ) ಮತ್ತು ಕಾರ್ಯದರ್ಶಿಗಳ ಕಾರ್ಯನಿರ್ವಹಣ ಅಧಿಕಾರಿಗಳು ಭಾಗಿಯಾಗಿದ್ದರು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಪ್ರಾದೇಶಿಕ ಸಭೆಯನ್ನು ಆನೇಕಲ್ ಪಟ್ಟಣದ ಆನೇಕಲ್ ಡೈರಿ ಶಿಬಿರದಲ್ಲಿ ಆಯೋಜನೆ ಮಾಡಲಾಗಿತ್ತು. ಆನೇಕಲ್ ಪಟ್ಟಣದ ಹಾಲು ಉತ್ಪಾದಿಕರ ಸಂಘ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ, ತುಂಬಾ ಲಾಭದಲ್ಲೂ ಇದೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ 12ನೇ ಸ್ಥಾನದಲ್ಲಿ ಇದ್ದಿದ್ದನ್ನು ಐದನೇ ಸ್ಥಾನಕ್ಕೆ ತಂದಿಟ್ಟಿದ್ದೇನೆ ನಮ್ಮ ಗುರಿ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮಾದರಿ ಸಂಘ ಮಾಡಬೇಕು ಮೊದಲನೇ ಸ್ಥಾನವನ್ನು ನೋಡಬೇಕು ಅನ್ನೋದೇ ನಮ್ಮ ಗುರಿ ಎಂದು ಬಮೂಲ್ ಅಧ್ಯಕ್ಷ ಅಂಜಿನಪ್ಪ ತಿಳಿಸಿದರು.
Kshetra Samachara
26/08/2022 07:41 pm