ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯ ಧ್ವಜಾರೋಹಣವನ್ನು ರಾಜ್ಯ ಸರ್ಕಾರ ಇಂದು ನೆರವೇರಿಸಿತು.

20 ಅಡಿಯ ಧ್ವಜ ಸ್ತಂಭವನ್ನು ಕಂದಾಯ ಇಲಾಖೆ ನೆಟ್ಟಿದ್ದು, ಇಂದು ಬೆಳಗ್ಗೆ 8 ಗಂಟೆಗೆ ರಾಜ್ಯ ಸರ್ಕಾರ ಕಂದಾಯ ಇಲಾಖೆ ಉಪ ವಿಭಾಗಾಧಿಕಾರಿ ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಜನಗಣಮನ ರಾಷ್ಟ್ರಗೀತೆ ಮೊಳಗಿತು. ಧ್ವಜಾರೋಹಣ ಸಂದರ್ಭದಲ್ಲಿ ಶಾಸಕ‌ ಜಮೀರ್ ಅಹ್ಮದ್ ಖಾನ್ ಹಾಗೂ ಸಂಸದ ಪಿ.ಸಿ.ಮೋಹನ್‌ ಭಾಗಿಯಾಗಿದ್ದರು.

ಮೈದಾನದ ಸುತ್ತಮುತ್ತ ಪೊಲೀಸ್‌ ಬಂದೋಬಸ್ತ ಕೈಗೊಂಡಿದ್ದರು. ಧ್ವಜಾರೋಹಣದ ಬಳಿಕ 500 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮೈದಾನದಲ್ಲಿ ವಂದೇ ಮಾತಂ, ಭಾರತ್ ಮಾತಾ ಕೀ ಜೈ ಘೋಷಣೆಗೆ ಮಾತ್ರ ಅವಕಾಶವಿತ್ತು.

ಸ್ವಾತಂತ್ರ್ಯ ದಿನಾಚರಣೆ ಮುಗಿಯುವರಿಗೆ ಮೈದಾನದ ಸುತ್ತ ಮುತ್ತ ಖಾಕಿ ಹದ್ದಿನ ಕಣ್ಣೀಡಲಾಗಿದೆ. ಸಂಜೆ ಗೌರವಯುತವಾಗಿ ಪೊಲೀಸರು ಧ್ವಜ ಇಳಿಸಲಿದ್ದು, ಚಾಮರಾಜಪೇಟೆ ಮೈದಾನಕ್ಕೆ ಬ್ಯಾರಿಗೇಡ್​ಗಳಿಂದ ಭದ್ರತೆ ನೀಡಲಾಗಿದೆ. ಒಟ್ಟು 3 ಪ್ರವೇಶ ದ್ವಾರ ಮೂಲಕ ಎಂಟ್ರಿಗೆ ವ್ಯವಸ್ಥೆ ಮಾಡಲಾಗಿದ್ದು, ಎರಡರಲ್ಲಿ ಸಾರ್ವಜನಿಕರಿಗೆ ಮತ್ತೊಂದರಲ್ಲಿ VIP, VVIPಗಳಿಗೆ ಎಂಟ್ರಿ ಇರಲಿದೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಮೊದಲ‌ ಬಾರಿಗೆ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದ್ದು, ಮೈದಾನ ಸುತ್ತಲೂ ಪೊಲೀಸ್ ಸರ್ಪಗಾವಲು. ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರು ಸಜ್ಜಾಗಿ ನಿಂತ್ತಿದ್ದಾರೆ.

ಮೈದಾನ ಸಂಪೂರ್ಣ RAF ಟೀಮ್ ಸುತ್ತುವರೆದಿದ್ದು, ಅಹಿತಕರ ಘಟನೆ ನಡೆಯದಂತೆ ಮೈದಾನದ ಮೇಲೆ ಖಾಕಿ ಕಣ್ಗಾವಲು ವಹಿಸಿದೆ. 250ರಿಂದ 300 ಮಂದಿ RAF ಟೀಮ್​ನಿಂದ ಭದ್ರತೆ ಒದಗಿಸಿದ್ದು, ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಮೈದಾನಕ್ಕೆ ಇಳಿಯಲಾಗಿದೆ. ಒಟ್ಟು 10 ಕೆಎಸ್‌ಆರ್‌ಪಿ, SWAT ಸ್ಪೆಷಲ್ ಫೋರ್ಸ್ 104ಕ್ಕೂ ಹೆಚ್ಚು ಮಂದಿ, ವಜ್ರ 2 ಡಿಆರ್‌ಡಿಒ ಟೀಮ್​ಗಳಿಂದ ಭದ್ರತೆ ನೀಡಲಾಗಿದೆ.

Edited By : Manjunath H D
PublicNext

PublicNext

15/08/2022 12:48 pm

Cinque Terre

51.08 K

Cinque Terre

0

ಸಂಬಂಧಿತ ಸುದ್ದಿ