ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆಎಎಸ್ ಪಾಸ್ ಮಾಡಸ್ತೀನಿ ಎಂದು ಲಕ್ಷ ಲಕ್ಷ ದೋಖ

ಬೆಂಗಳೂರು: KAS ಪಾಸು ಮಾಡೋ ಕನಸು ಹೊತ್ತ ಅಭ್ಯರ್ಥಿಗಳನ್ನೇ ಟಾರ್ಗೇಟ್ ಮಾಡಿಕೊಂಡು ವಂಚಿಸುತ್ತಿದ್ದ ವಂಂಚಕನೊಬ್ಬನನ್ನು ವಿಜಯನಗರ ಪೊಲೀಸರುಬಂಧಿಸಿದ್ದಾರೆ. ಐಎಎಸ್, ಐಪಿಎಸ್ ಅಧಿಕಾರಿಗಳ ಹೆಸರು ಹೇಳಿ ಬರೋಬ್ಬರಿ 59 ಲಕ್ಷ ರೂ. ವಂಚನೆ ಮಾಡಿದ್ದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಸಿದ್ದರಾಜು ಕಟ್ಟಿಮನಿ ಬಂಧಿತ ಆರೋಪಿಯಾಗಿದ್ದು, ಕೆಎಎಸ್​​ ಪಾಸ್​ ಮಾಡಿಸುವುದಾಗಿ ಹೇಳಿ ವಂಚಕ ಹಣ ಪಡೆದಿದ್ದ. ವಂಚನೆಗೊಳಗಾದ ಸವಿತಾ ಶಾಂತಪ್ಪ ವಿಜಯನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ವಂಚಕ ಸಿದ್ದರಾಜು ಕಟ್ಟಿಮನಿಯನ್ನು ಬಂಧನ ಮಾಡಲಾಗಿದೆ. ಸವಿತಾ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲ​ಪುರದವರು. ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಸವಿತಾಗೆ ಆರೋಪಿ ಸಿದ್ದರಾಜ್ ಕಟ್ಟಿಮನಿ ಪರಿಚಿತನಾಗಿದ್ದ. ಆರೋಪಿ ತನಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಪರಿಚಯ ಎಂದು ಪಾಸ್ ಮಾಡಿಸೋದಾಗಿ ಹೇಳಿದ್ದ. IAS ಅಧಿಕಾರಿ ಶಾಲಿನಿ ರಜನೀಶ್, ಪ್ರವೀಣ್ ಸೂದ್ ನನಗೆ ಪರಿಚಿತರೆಂದು ಸಿದ್ದರಾಜ್ ನಂಬಿಸಿದ್ದ. ಆರೋಪಿಗೆ ಮೊದಲ ಹಂತದಲ್ಲಿ 15 ಲಕ್ಷ ಹಣ ನೀಡಿದ್ದ ಸವಿತಾ, ಬಳಿಕ ಹಂತ ಹಂತವಾಗಿ 59 ಲಕ್ಷ ಹಣ ನೀಡಿದ್ದರು. ಇನ್ನೂ ಜಮೀನು ಅಡಮಾನವಿಟ್ಟು ಸವಿತಾ ತಂದೆ ಶಾಂತಪ್ಪ ಹಣ ನೀಡಿದ್ದರು. ಮತ್ತೆ ಮತ್ತೆ ಆರೋಪಿ ಹಣ ಕೇಳೋದನ್ನು ನೋಡಿದ ಸವಿತಾ ಕೊಟ್ಟ ಹಣವನ್ನು ವಾಪಾಸ್ ಕೊಡುವಂತೆ ಕೇಳಿದ್ದರು. ಆಗ ಆರೋಪಿ ಸಿದ್ದರಾಜು ಕಟ್ಟಿಮನಿ ಏನ್ ಮಾಡ್ತಿಯೋ ಮಾಡ್ಕೋ, ಹಣ ವಾಪಸ್ ಕೊಡಲ್ಲ ಅಂದಿದ್ದ. ಮತ್ತೆ ಮತ್ತೆ ಹಣ ಕೇಳಿದ್ರೆ ನಿಮ್ಮ ಮನೆಯಲ್ಲಿ ಯಾರನ್ನೂ ಉಳಿಸಲ್ಲವೆಂದು ಹಣ ಪಡೆದು ಸವಿತಾಗೆ ಬೆದರಿಕೆ ಹಾಕಿದ್ದ.

ಕೆಲಸ ಸಿಗದೇ ಹಣವೂ ಕಳೆದುಕೊಂಡು ಸವಿತಾ ಕುಟುಂಬ ಕಣ್ಣೀರು ಹಾಕ್ತಿದ್ದಾರೆ. ಸದ್ಯ ತನಗಾದ ಅನ್ಯಾಯದ ಬಗ್ಗೆ ವಿಜಯನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ದೂರಿನನ್ವಯ ಐಪಿಸಿ 420 ಅಡಿ ಪ್ರಕರಣ ದಾಖಲಿಸಿ ಸಿದ್ದರಾಜ್ ಕಟ್ಟಿಮನಿ ಬಂಧನ ಮಾಡಲಾಗಿದೆ.

Edited By : Nagaraj Tulugeri
PublicNext

PublicNext

10/08/2022 03:50 pm

Cinque Terre

16.03 K

Cinque Terre

1

ಸಂಬಂಧಿತ ಸುದ್ದಿ