ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬುದ್ದಿಮಾಂದ್ಯ ಮಗುವೆಂದು ಹಡೆದವಳಿಂದಲೇ ಹತ್ಯೆ: ತಾಯಿ ಸ್ಥಾನಕ್ಕೆ ಕಳಂಕ ತಂದ ದುರಂತ ಕಥೆ

ಬೆಂಗಳೂರು: ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದ್ರೆ ಈ ಮಾತನ್ನೇ ಇಲ್ಲೊಬ್ಳು ತಾಯಿ ಸುಳ್ಳು ಮಾಡಿ ಬಿಟ್ಟಿದ್ದಾಳೆ.

ಈ ಸಿಸಿಟಿವಿ ದೃಶ್ಯವನ್ನ ನೋಡ್ತಿದ್ರೆ ಎಂತಹವರಿಗಾದ್ರು ಎದೆ ಝಲ್ ಅನ್ಸುತ್ತೆ. ಮಗುವನ್ನ ಪ್ರೀತಿಸೋ ತಾಯಂದಿರಿಗೆ ಕರುಳು ಕಿತ್ತು ಬರುತ್ತೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಹೇಳೋದು ಒಂದೆ ಇವಳೆಂತ ತಾಯಿ ಅಂತ…

ಹೌದು ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಇಂತಹದೊಂದು ಹೇಯ ಕೃತ್ಯ ನಡೆದುಹೋಗಿದೆ. ಅಂದಹಾಗೆ ಹೀಗೆ ಮಗುವನ್ನ ಮೇಲಿಂದ ಎಸೆದು ಕೊಂದ ಈಕೆಯ ಹೆಸರು ಸುಷ್ಮಾ ಅಂತ. ದಂತವೈದ್ಯೆಯಾಗಿರೋ ಸುಷ್ಮಾ ಹಾಗೂ ಕಿರಣ್ ದಂಪತಿ ಬೆಂಗಳೂರಿನ ಸಂಪಂಗಿರಾಮನಗರದ ಅದ್ವಿತ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು.ಇವರಿಗೆ ನಾಲ್ಕು ವರ್ಷದ ದಿತಿ ಎಂಬುವ ಹೆಣ್ಣುಮಗುವಿದ್ದು, ಕೊಂಚ ಬುದ್ದಿಮಾಂದ್ಯವಾಗಿದ್ದು ಮಾತನಾಡಲು ಬರುತ್ತಿರಲಿಲ್ಲ. ಇದು ತಾಯಿ ಸುಷ್ಮಾಗೆ ಕೊಂಚವೂ ಇಷ್ಟವಿರಲಿಲ್ಲ. ಮಗು ಬುದ್ದಿಮಾಂದ್ಯ ಅಂತ ಮಗುವನ್ನ ನಿರ್ಲಕ್ಷ್ಯ ಮಾಡ್ತಿದ್ದಳು. ನಿನ್ನೆ ಅದೇನಾಯ್ತೋ ಏನೋ, ಮಧ್ಯಾಹ್ನ 3 ಗಂಟೆಗೆ ಅಪಾರ್ಟ್ ಮೆಂಟ್ ನ ನಾಲ್ಕನೇ ಫ್ಲೋರ್ ಗೆ ಮಗುವನ್ನ ತೆಗೆದುಕೊಂಡು ಹೋಗಿದ್ಳು. ನಂತರ ಯಾರೂ ಇಲ್ಲದ ಸಮಯ ನೋಡಿ ಮೇಲಿಂದ ಕೆಳಗೆ ಎಸೆದುಬಿಟ್ಟಿದ್ದಾಳೆ.ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ರೀತಿ ಡ್ರಾಮಾ ಮಾಡಿದ್ದು, ಅಪಾರ್ಟ್ ಮೆಂಟ್ ನಿವಾಸಿಗಳು ಆಕೆಯನ್ನ ರಕ್ಷಿಸಿದ್ದಾರೆ.ಆದ್ರೆ ಕೆಳಗೆ ಬಿದ್ದ ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಸುಷ್ಮಾ ಹಾಗೂ ಕಿರಣ್ 11 ವರ್ಷಗಳ ಹಿಂದೆ ಮದುವೆಯಾಗಿದ್ರು. ಮದುವೆಯಾದ ಕೆಲವು ವರ್ಷಗಳ ನಂತರ ಅಮೇರಿಕಾ ಕೂಡ ಹೋಗಿ ಬಂದಿದ್ರು. ಮಗುವಿನ ಬಗ್ಗೆ ಸುಷ್ಮಾಗೆ ಸ್ವಲ್ಪವೂ ಆಸೆಯಿರಲಿಲ್ಲ. ಬುದ್ದಿಮಾಂದ್ಯ ಮಗುವನ್ನ ಅನಾಥಾಶ್ರಮ ಸೇರಿಸೋ ಕುರಿತು ಗಂಡನ ಜೊತೆ ಪ್ರತಿನಿತ್ಯ ಕಿರಿಕ್ ಮಾಡಿಕೊಳ್ಳುತ್ತಿದ್ದಳು. ಆದ್ರೆ ಸುಷ್ಮಾ ಪತಿ ಕಿರಣ್ ಗೆ ಇದು ಇಷ್ಟವಿರಲಿಲ್ಲ. ಮಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ. ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಸುಷ್ಮಾ ಮಗುವನ್ನ ರೈಲ್ವೇ ಸ್ಟೇಷನ್ ನಲ್ಲಿ ಬಿಟ್ಟು ಬಂದಿದ್ದಳಂತೆ. ನಂತರ ತಂದೆ ಕಿರಣ್ ಮತ್ತೆ ಮಗುವನ್ನ ಹುಡುಕಿ ವಾಪಸ್ಸು ಕರೆತಂದಿದ್ದರು. ಇದೀಗ ಯಾರೂ ಇಲ್ಲದ ಸಮಯ ನೋಡಿ ಸುಷ್ಮಾ ಮಗುವನ್ನ ಕೊಂದೇಬಿಟ್ಟಿದ್ದಾಳೆ.

ಇನ್ನೂ ಮಗುವನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಇತ್ತ ಮಗು ಕೊಂದ ತಾಯಿಯನ್ನ ಬಂಧಿಸಿರುವ ಸಂಪಂಗಿರಾಮನಗರ ಪೊಲೀಸ್ರು, 302 ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಅದೇನೆ ಇರ್ಲಿ ಮಗುವನ್ನ ಕೊಂದ ಈ ಪಾಪಿ ನಿಜಕ್ಕೂ ತಾಯಿ ಎಂಬ ಪದಕ್ಕೆ ಕಳಂಕ ತಂದಿದ್ದಾಳೆ.

-ಶ್ರೀನಿವಾಸ್ ಚಂದ್ರ ಕ್ರೈಂ‌ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Shivu K
PublicNext

PublicNext

05/08/2022 08:58 pm

Cinque Terre

42.43 K

Cinque Terre

2

ಸಂಬಂಧಿತ ಸುದ್ದಿ