ಬೆಂಗಳೂರು: ತನ್ನ ಹೆಂಡತಿಯನ್ನ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾನೆಂದು ಪರಿಚಿತನನ್ನೆ ಮರದ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಭಕ್ಷಿ ಗಾರ್ಡನ್ ನಲ್ಲಿ ತಡರಾತ್ರಿ ನಡೆದಿದೆ.
ಇನ್ನು ಭಕ್ಷಿ ಗಾರ್ಡನ್ ನಲ್ಲಿ ಮೃತ ಶ್ರೀನಿವಾಸ್ ಹಾಗೂ ಆರೋಪಿ ಸಂತೋಷ್ ವಾಸವಾಗಿದ್ದರು. ಇಬ್ಬರು ಕೂಡ ಪರಿಚಯಸ್ಥರೆ. ನಿನ್ನೆ ಕುಡಿದ ಮತ್ತಿನಲ್ಲಿದ್ದ ಸಂತೋಷ್ ಮನೆಯ ಹತ್ತಿರ ಬಂದು ಮೃತನು ತನ್ನ
ಹೆಂಡತಿಯನ್ನ ನಿಂದಿಸಿದ್ದಾನೆಂದು ಕುಪಿತಗೊಂಡು ಅಲ್ಲೆ ಸಮೀಪದಲ್ಲಿ ಟೀ ಕುಡಿಯುತ್ತಿದ್ದಾಗಲ್ಲೇ ಶ್ರೀನಿವಾಸ್
ಮರದ ಕಟ್ಟಿಗೆಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ .
ಇನ್ನು ಹಲ್ಲೆ ಮಾಡಿದಲ್ಲದೇ ರಾತ್ರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದಾನೆ. ಆದ್ರೆ ರಾತ್ರಿ ಸಂತೋಷ್ ಮೃತ ಪಟ್ಟಿದ್ದಾನೆಂದು ಮೃತನ ತಾಯಿ ಕಾಟನ್ ಪೇಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ದೂರಿನ ಆಧಾರದ ಮೇಲೆ ಆರೋಪಿ ಶ್ರೀನಿವಾಸ್ ನನ್ನ ಬಂಧನ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
01/08/2022 06:49 pm