ಬೆಂಗಳೂರು:ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಆಫ್ರಿಕಾ ಮೂಲದ ನಮ್ಯುಟೆಬಿ ಶಮ್ರಿಯಾ, ನನ್ಫುಕಾ ಫಿಯೊನ ಬಂಧಿತರು.2020ರಲ್ಲಿ ಟೂರಿಸ್ಟ್ ವಿಸಾದಡಿ ಎ1 ಆರೋಪಿ ನಮ್ಯುಟೆಬಿ, 2021ರಲ್ಲಿ ಮೆಡಿಕಲ್ ವೀಸಾದಡಿ ನನ್ಫುಕಾ ಫಿಯೊನ ನಗರಕ್ಕೆ ಆಗಮಿಸಿದ್ದರು.
ವೀಸಾ ಅವಧಿ ಮುಗಿದರೂ ಸಹ ಇಬ್ಬರೂ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದರು. ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದರು. ಸದ್ಯ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ 1.50 ಲಕ್ಷ ಬೆಲೆ ಬಾಳುವ ಎಂಡಿ ಕ್ರಿಸ್ಟಲ್ , 2 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಇಬ್ಬರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ
Kshetra Samachara
09/07/2022 07:57 pm