ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು :ಚಾಕು ತೋರಿಸಿ ಸುಲಿಗೆ‌ ಮಾಡಿದ್ದಕ್ಕೆ ಬಿತ್ತು ಧರ್ಮದೇಟು: ಸಾರ್ವಜನಿಕರ ವಿರುದ್ಧವೇ ಕಳ್ಳ ಕೊಟ್ಟ ಕಂಪ್ಲೇಂಟ್

ಬೆಂಗಳೂರು : ಚಾಕು ತೋರಿಸಿ ಸುಲಿಗೆ ಮಾಡಿದ್ದ ಖದೀಮನೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿರೋ ಘಟನೆ ಸದಾಶಿವನಗರ ಠಾಣೆಯಲ್ಲಿ ನಡೆದಿದೆ. ಜೂನ್ 24ರಂದು ರಾತ್ರಿ ತಬ್ರೇಜ್ ಹಾಗೂ ತೌಸೀಫ್ ಎಂ.ಎಸ್.ರಾಮಯ್ಯ ನಗರದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಾಕು ತೋರಿಸಿ ಆತನ ಮೊಬೈಲ್‌ ಹಾಗೂ ಬೈಕ್ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಕಳ್ಳರನ್ನ ಬೆನ್ನಟ್ಟಿ ಅರೋಪಿಗಳನ್ನ ಹಿಡಿದಿದ್ದ ಬೈಕ್ ಮಾಲೀಕ ಆರೋಪಿಗಳನ್ನ ಥಳಿಸಿದ್ದಾನೆ. ಇದೇ ವೇಳೆ ವಿಷಯ ತಿಳಿದ ಸಾರ್ವಜನಿಕರು ಸಹ ಆರೋಪಿಗಳಿಗೆ ಥಳಿಸಿದ್ರು. ನಂತರ ಸ್ಥಳಕ್ಕೆ ಬಂದ ಪೊಲೀಸರಿಗೆ ಆರೋಪಿಗಳನ್ನ ಒಪ್ಪಿಸಿದ್ದಾರೆ.

ಆದರೆ ಸಾರ್ವಜನಿಕರಿಂದ‌ ಹಲ್ಲೆಗೊಳಗಾಗಿ ತಬ್ರೇಜ್ ತೀವ್ರ ಅಸ್ವಸ್ಥನಾಗಿದ್ದ ಕಾರಣ ಸಾರ್ವಜನಿಕರ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಅಪರಿಚಿತರು ತನ್ನನ್ನ ಥಳಿಸಿ ಹಲ್ಲೆ ಮಾಡಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಸದಾಶಿವನಗರ ಠಾಣೆಗೆ ದೂರು ನೀಡಿದ್ದು ಕೋರ್ಟ್ ಅನುಮತಿ ಮೇರೆಗೆ ಸದಾಶಿವನಗರ ಠಾಣಾ ಪೊಲೀಸರು ಬಂಧಿತ ನೀಡಿರುವ ದೂರನ್ನೂ ಸಹ ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ‌.

Edited By : Nagesh Gaonkar
PublicNext

PublicNext

02/07/2022 08:53 pm

Cinque Terre

62.16 K

Cinque Terre

0

ಸಂಬಂಧಿತ ಸುದ್ದಿ