ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಂದುವರೆ ವರ್ಷದ ಬಳಿಕ ಜೈಲಿನಿಂದ ಹೊರಬಂದ ವಿಲ್ಸನ್ ಗಾರ್ಡನ್ ನಾಗ

ಬೆಂಗಳೂರು: ಬೆಂಗಳೂರು ಭೂಗತ ಜಗತ್ತಿನ ಮೋಸ್ಟ್ ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಇಂದು ಮುಂಜಾನೆ ಜೈಲಿನಿಂದ ರಿಲೀಸ್ ಆಗಿದ್ದಾನೆ. ಕಳೆದ ಒಂದುವರೆ ವರ್ಷದಿಂದ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ನಾಗ ಇಂದು ಜೈಲು ಅನ್ ಲಾಕ್ ಆಗೋ ಟೈಂ‌ನಲ್ಲಿ ರಿಲೀಸ್ ಆಗಿದ್ದಾನೆ.

ಜೈಲಿನಲ್ಲಿದ್ದುಕೊಂಡೆ ನಾಗ ಬೆಂಗಳೂರು ರೌಡಿ ಪಾಳಯದಲ್ಲಿ ತನ್ನ ಕಬಂಧ ಬಾಹು ಚಾಚಿದ್ದ. ಇನ್ನು ನಾಗ ಜೈಲಿಗೆ ಹೋದ್ರೆ ದುಶ್ಮನ್ ಹೆಣ ಬೀಳೋದು ಪಕ್ಕ ಅಂತ ನಾಗನ ಎದುರಾಳಿ ಪಡೆ ಮಾತನಾಡಿಕೊಳ್ತಾರೆ. ಅದ್ರಂತೆ ನಾಗ ಜೈಲಿನಲ್ಲಿರೋವಾಗಲೇ ಕೋರಮಂಗಲದ ಬಬ್ಲಿ ಕೊಲೆಯಾಗಿತ್ತು. ಇದ್ರಲ್ಲೂ ನಾಗನ ಕೈವಾಡ ಇದೆ ಅಂತ ಪೊಲೀಸರು ನಾಗನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಇನ್ನೂ ಅನ್ನಪೂರ್ಣೇಶ್ವರಿ ನಗರಣ ಡಬಲ್‌ ಮೀಟ್ರು ಮೋಹನನ ಕೇಸ್‌ನಲ್ಲೂ ನಾಗನ ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ನಡೆಸಿದ್ರು.

ಇನ್ನೂ ಕಳೆದವಾರವೇ ನಾಗ ಜೈಲಿನಿಂದ ರಿಲೀಸ್ ಆಗ್ತಾನೆ ಅನ್ನೋ ಸುದ್ದಿ ಕೂಡ ಹರಿದಾಡಿತ್ತು.‌ನಾಗನ ರಿಲೀಸ್ ವಿಚಾರ ಗೊತ್ತಾಗಿ ಸಿಟಿಯ ಕೆಲ ಪೊಲೀಸರು ನಾಗನನ್ನ ಹಳೇ ಕೇಸ್‌ನಲ್ಲಿ ಕಸ್ಟಡಿಗೆ ಪಡೆಯಲು ಜೈಲು ಬಳಿ ಕಾದುಕುಳಿತಿದ್ರು.‌ ಆದ್ರೆ ಪೊಲೀಸರು ಮತ್ತೆ ಕಸ್ಟಡಿಗೆ ಪಡಿತಾರೆ ಎಂಬ ಕಾರಣಕ್ಕೆ ನಾಗ ರಿಲೀಸ್ ಆಗಿರಲಿಲ್ಲ.‌ ಇಂದು ಮುಂಜಾನೆ ಕೇಂದ್ರ ಕಾರಗೃಹದಿಂದ ರಿಲೀಸ್ ಆಗಿ ನಾಗ ಹೊರ ಬಂದಿದ್ದಾನೆ.

Edited By : Shivu K
PublicNext

PublicNext

29/06/2022 10:10 am

Cinque Terre

40.4 K

Cinque Terre

3

ಸಂಬಂಧಿತ ಸುದ್ದಿ