ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣ ವಿಜಯಪುರ ರಸ್ತೆಯ ಕಾಲೇಜ್ ಆವರಣದಲ್ಲಿಯ ಕೃಷಿ ಹೊಂಡದಲ್ಲಿ ಬಿದ್ದು ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಹನುಮಂತು (16) ಮೃತಪಟ್ಟ ದುರ್ದೈವಿ.
ಹನುಮಂತು ಮೂಲತಃ ಹಾವೇರಿ ಜಿಲ್ಲೆ ಚಿನ್ನೂರುಬಂಡಿ ನಿವಾಸಿ. ಕನಕಶ್ರೀ ಜ್ಞಾನದೀಪ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಾಲೇಜು ಆವರಣದಲ್ಲಿನ ಹೊಂಡಕ್ಕೆ ಸೂಕ್ತ ತಂತಿಬೇಲಿ ಹಾಕಿರಲಿಲ್ಲ. ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಸಾವು ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ದೇವನಹಳ್ಳಿ
PublicNext
26/06/2022 07:24 pm