ಬೆಂಗಳೂರು: ಎಟಿಎಂ ಮಷಿನ್ ನಲ್ಲಿ ಹಣ ಕಳವಿಗೆ ಯತ್ನಿಸುತ್ತಿದ್ದ ಕಳ್ಳನೋರ್ವ ಪೊಲೀಸರಿಗೆ ರೆಡ್ ಹ್ಯಾಂಡಾಗಿ ತಗ್ಲಾಕೊಂಡು ಜೈಲು ಸೇರಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಹೆಸರಘಟ್ಟರಸ್ತೆಯ ಚಿಕ್ಕಸಂದ್ರದ ಬಳಿ ನಡೆದಿದೆ.
ಇನ್ನೂ ಪಂಜಾಬ್ ಮೂಲದ ಸಮರ್ಜೋತ್ ಸಿಂಗ್ 34 ವರ್ಷ ಬಂಧಿತ ಆರೋಪಿಯಾಗಿದ್ದು, ಚಿಕ್ಕಸಂದ್ರ ಸಮೀಪದ ಕೆನರಾ ಬ್ಯಾಂಕ್ ಎಂಟಿಎಂ ಬಳಿ ಹಣ ಕಳವಿಗೆ ಯತ್ನಿಸುವಾಗಲೇ ಗಸ್ತಿನಲ್ಲಿದ್ದ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದೇ ವೇಳೆ ಕೃತ್ಯಕ್ಕೆ ಬಳಸುತ್ತಿದ್ದ ಚಾಕು, ರಾಡ್, ಗ್ಯಾಸ್ ಸಿಲಿಂಡರ್, ಕಟರ್ ಸೇರಿದಂತೆ ಹಲವು ಸಾಧನಗಳನ್ನ ಸೋಲದೇವನಹಳ್ಳಿ ಪೊಲೀಸ್ರು ಜಪ್ತಿ ಮಾಡಿದ್ದು, ಪೊಲೀಸರ ತನಿಖೆ ವೇಳೆ ಆರೋಪಿ ಸಮರ್ಜೋತ್ ಸಿಂಗ್ ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸ್ರು ಸದ್ಯ ಆರೋಪಿಯನ್ನ ಜೈಲಿಗಟ್ಟಿದ್ದಾರೆ.
Kshetra Samachara
11/06/2022 06:07 pm