ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರಗಳ್ಳತನಕ್ಕೆ ಯತ್ನಿಸಿ ಜೈಲು ಪಾಲಾದ ಜೋಡಿ ಹಕ್ಕಿ

ಬೆಂಗಳೂರು: ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದ ಯುವಕ, ಆಕೆಯ ಗೆಳತಿ ಜೊತೆ ಸೇರಿ ಸರಗಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ. ಸದ್ಯ ಈ ಇಬ್ಬರು ಜೋಡಿ ಹಕ್ಕಿಗಳನ್ನು ನಂದಿನಿ‌ ಲೇಔಟ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕಳೆದ‌‌ ಮೇ 28 ರಂದು ನಂದಿನಿ‌‌ ಲೇಔಟ್ ಪಾರ್ಕ್ ಬಳಿ ಗಾಯತ್ರಿ ಎಂಬುವರು ವಾಕಿಂಗ್ ಮಾಡುತ್ತಿದ್ರು. ಈ ವೇಳೆ ಸ್ಕೂಟರ್ ನಲ್ಲಿ ಬಂದಿದ್ದ ಯುವಕ ಹಾಗೂ ಆಕೆಯ ಸ್ನೇಹಿತೆ‌ ಮಹಿಳೆಯ ಹಿಂಬದಿಯಿಂದ ಹೋಗಿ ಖಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿಯಲು ಪ್ರಯತ್ನಿಸಿದ್ದಾಳೆ. ಇದಕ್ಕೆ‌ ಮಹಿಳೆ‌ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಜ‌ನ‌ ಸೇರುತ್ತಿದ್ದಂತೆ ಆಲರ್ಟ್ ಆದ ಆರೋಪಿತೆ ಸ್ನೇಹಿತನ‌ ಸ್ಕೂಟರ್ ನಲ್ಲಿ ಎಸ್ಕೇಪ್ ಆಗಿದ್ರು. ಮಹಿಳೆ‌ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಂದಿನಿ‌ಲೇಔಟ್ ಪೊಲೀಸರು ಸೆರೆಯಾಗಿದ್ದ ಸಿಸಿಟಿವಿ ಹಾಗೂ ಬೈಕ್‌ ನಂಬರ್ ಆಧಾರದ ಮೇಲೆ‌ ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ನಗರದ ಖಾಸಗಿ‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ‌ ಹಾಗೂ ಯುವತಿ ಟ್ರೇಡಿಂಗ್ ಆ್ಯಪ್ ನಲ್ಲಿ ಹಣ ಹೂಡಿಕೆ‌ ಮಾಡಿದ್ದರು. ಇದರಲ್ಲಿ ಹಣ ಕಳೆದುಕೊಂಡಿದ್ದರಿಂದ ಆನ್ ಲೈನ್ ಮೂಲಕ 15 ಸಾವಿರ‌ ರೂಪಾಯಿ ಹಣವನ್ನು ಯುವಕ ಸಾಲವಾಗಿ ಪಡೆದುಕೊಂಡಿದ್ದ. ಪಡೆದಿದ್ದ ಹಣವನ್ನ‌ ಇಬ್ಬರು ಖರ್ಚು ಮಾಡಿಕೊಂಡಿದ್ದರು. ಲೋನ್ ತೀರಿಸಲು‌ ಬ್ಯಾಂಕ್ ನಿಂದ ಒತ್ತಡ ಬಂದಿತ್ತು.‌ ಇದರಿಂದ ಕಂಗೆಟ್ಟ ಯುವಕನಿಗೆ ಗೆಳತಿ ಸಾಥ್ ನೀಡಿದ್ದಳು.‌ ಇಬ್ಬರು ಸೇರಿ ಸರಗಳ್ಳತನ‌‌ ಮಾಡಲು ತೀರ್ಮಾಸಿದ್ದರು.‌ ಇದರಂತೆ‌ ಮೇ 28ರಂದು ಮಹಿಳೆಯೋರ್ವರ ಮೇಲೆ‌ ಖಾರದ ಪುಡಿ ಎರಚಿ ಸರಗಳ್ಳತನಕ್ಕೆ ವಿಫಲ ಯತ್ನ‌‌ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/06/2022 03:58 pm

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ