ಬೆಂಗಳೂರು:ಐಪಿಎಲ್ ನ ಹೈ ಓಲ್ಟೋಜ್ ಮ್ಯಾಚ್ ಆದ ಆರ್ ಸಿಬಿ ಲಕ್ನೋ ಮ್ಯಾಚ್ ಬೆಟ್ಟಿಂಗ್ ಮಾಡ್ತಿದ್ದ ಬುಕ್ಕಿಯನ್ನ ಪೊಲೀಸ್ರು ಬಂಧಿಸಿದ್ದಾರೆ. ಬೆಟ್ಟಿಂಗ್ ನಡೆಸ್ತಿದ್ದ ಬುಕ್ಕಿ ಸುನೀಲ್‌ನ ಚಂದ್ರಾಲೇಔಟ್ ಪೊಲೀಸ್ರು ಬಂಧಿಸಿದ್ದಾರೆ.
ಸುನೀಲ್ ಚಂದ್ರಾ ಲೇಔಟ್ನ ಮೆಟ್ರೋಲೇಔಟ್ ಬಳಿ ಜನರಿಂದ ಹಣ ಪಡೆದುಕ್ರಿಕೆಟ್ ಗುರು ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸ್ತಿದ್ದ. ಈ ವೆಳೆ ಚಂದ್ರಾಲೇಔಟ್ ಪೊಲೀಸ್ರು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಆರೋಪಿ ಸುನೀಲ್ ನ ಬಂಧಿಸಿ ಬಂಧಿತನಿಂದ ಒಂದು ಮೊಬೈಲ್ ಹಾಗೂ 29 ಸಾವಿರ ಕ್ಯಾಶ್ ಸೀಜ್ ಮಾಡಿ ಚಂದ್ರಾಲೇಔಟ್ ಠಾಣೆ ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ.
Kshetra Samachara
25/05/2022 09:13 pm