ಬೆಂಗಳೂರು: ಕಾಟನ್ ಪೇಟೆಯಲ್ಲಿ ಮಂಗಳಮುಖಿಯರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತೃತೀಯಲಿಂಗಿ ಅರ್ಚನಾ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ.
ಸೆಕ್ಸ್ ವರ್ಕ್ ಮಾಡಿಕೊಂಡಿದ್ದ ಇಬ್ಬರು ಟ್ರಾನ್ಸ್ ಜಂಡರ್ ಮೇಲೆ ಕಾಟನ್ ಪೇಟೆಯ ಶಿವಾಸ್ ಲಾಡ್ಜ್ ನಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆದಿತ್ತು. ಹಲ್ಲೆಯಲ್ಲಿ ಅರ್ಚನಾ, ಸಂಜನಾ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಅರ್ಚನಾ ಸಾವಿಗೀಡಾಗಿದ್ದು, ಕಾಟನ್ ಪೇಟೆ ಪೊಲೀಸ್ರು ಕೊಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Kshetra Samachara
15/05/2022 07:50 pm