ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಷ್ಕಾ ಮತ್ತು ಗಾಂಜಾ ಗಲಾಟೆ ಕೊಲೆಯಲ್ಲಿ ಅಂತ್ಯ !

ಬೊಮ್ಮನಹಳ್ಳಿ: ಆ ಹುಡುಗ್ರ ನಡುವೆ ಯುಗಾದಿ ಹಬ್ಬದ ದಿನ ದೇವಸ್ಥಾನದ ಮುಂದೆ ಕುಷ್ಕಾ ಮತ್ತು ಗಾಂಜಾ ಹೊಡೆಯವ ವಿಚಾರಕ್ಕೆ ಸಣ್ಣ ಗಲಾಟೆಯಾಗಿತ್ತು. ಈ ಗಲಾಟೆ ಅಲ್ಲಿಗೆ ಮರೆತು ಹೋಗಿದ್ದರು, ಎಲ್ಲಾ ಓಕೆ ಇರ್ತಿತ್ತು. ಆದ್ರೆ ಗಲಾಟೆ ದ್ವೇಷಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಫೋಟೊದಲ್ಲಿ ಕಾಣಿಸ್ತಿರೊ ಹುಡುಗನ ಹೆಸರು ಸುಹಾಸ್. ಜಸ್ಟ್ 19 ವರ್ಷ.ಪ್ರಭಾಕರ್ ಹಾಗೂ ಕವಿತಾ ದಂಪತಿಯ ಎರಡನೇ ಪುತ್ರ.ಬಿಟಿಎಂ ಲೇಔಟ್ ನಾಲ್ಕನೇ ಹಂತದ ದೇವರಚಿಕ್ಕನಹಳ್ಳಿ ನಿವಾಸಿ.ಏಪ್ರಿಲ್ 9 ರಂದು‌ ಸ್ನೇಹಿತ ಜೀವನ್ ಮದುವೆ ಪಾರ್ಟಿಗೆ ಹೋಗ್ತತಿದ್ದವನನ್ನ ಸಂಜೆ 4.30 ರಿಂದ 5 ಗಂಟೆ ಸುಮಾರಿಗೆ ಪ್ರಜ್ವಲ್ ಅಲಿಯಾಸ್ ಕಾಂತ ಎಂಬಾತ ಬಂದು ಆಟೊ ಹತ್ತಿಸಿಕೊಂಡು ಹೋಗಿದ್ದ.

ಆದರೆ ಅಂದು ಹೋದವನು ಎರಡು ದಿನವಾದ್ರು ಮನೆಗೆ ಬಂದಿರ್ಲಿಲ್ಲ.ಹೀಗಾಗಿ ಪೋಷಕರು ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ರು.ತನಿಖೆಗೆ ಇಳಿದ ಪೊಲೀಸರಿಗೆ ಸುಹಾಸ್ ಕೊಲೆಯಾಗಿದ್ದಾನೆ ಅನ್ನೋ ವಿಚಾರ ಗೊತ್ತಾಗಿದೆ.

ಅಷ್ಟಕ್ಕೂ ಆಗಿದ್ದೇನಂದ್ರೆ ಹಳೆ ವಿಚಾರವಾಗಿ ಪ್ರಜ್ವಲ್ ಮತ್ತು ಸುಹಾಸ್ ಮಧ್ಯೆ ಆಗಾಗ ಗಲಾಟೆ ನಡೀತಾ ಇತ್ತು.ಸುಹಾಸ್ ಪ್ರಜ್ವಲ್ ನನ್ನ ಮುಗಿಸಿಬಿಡ್ತಿನಿ ಅಂತಾ ಹೇಳ್ಕೊಂಡು ತಿರುಗಾಡ್ತಿದ್ದ.ಇದ್ರಿಂದ ಹೆದರಿದ್ದ ಪ್ರಜ್ವಲ್, ಸುಹಾಸ್ ನನ್ನ ಗಾರೆಬಾವಿಪಾಳ್ಯದ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರೊ‌ ಸಿಗ್ನಲ್ ನಿಂದ, ಆಟೊದಲ್ಲಿ ಕರೆದುಕೊಂಡು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ವಿಟ್ಟಸಂದ್ರ ಬ್ರಿಡ್ಜ್ ಬಳಿಯ ನಿರ್ಜನ ಪ್ರದೇಶಕ್ಕೆ ಹೋಗಿದ್ದಾನೆ.ಅಲ್ಲಿಗೆ ಪ್ರಜ್ವಲ್ ಸ್ನೇಹಿತರಾದ ಹಿಮಾದ್ರಿ, ಜೀವನ್, ಸಚಿನ್, ರಾಕೇಶ್, ಅವಿನಾಶ್, ಸಾಗರ್ ಕೂಡ ಬಂದಿದ್ದಾರೆ.ಮಾತುಕತೆ ಶುರು ಮಾಡಿದ್ದು ಸುಹಾಸ್ ಮಾತ್ರ ಕಾಂಪ್ರಮೈಸ್ ಆಗೊ ಲಕ್ಷಣಗಳು ಕಾಣಿಸಲಿಲ್ಲ.ಬಿಟ್ರೆ ನಮ್ಮನ್ನೇ ಮುಗಿಸ್ತಾನೆ ಅಂದುಕೊಂಡವರು ಚಾಕುವಿನಿಂದ ಇರಿದು,ತಲೆ ಮೇಲೆ ಕಲ್ಲೆತ್ತಾಕಿ ಕೊಂದಿದ್ದಾರೆ.

ಹೀಗೆ ಸುಹಾಸ್ ಕೊಂದು ಮುಗಿಸಿದ ಆಸಾಮಿಗಳು ಬಂದಿದ್ದ ಆಟೊ,ಬೈಕ್ ಅನ್ನ ಅತ್ತಿಬೆಲೆ ಬಳಿ ಬಿಟ್ಟು ಬಸ್ ಹತ್ತಿದ್ದಾರೆ.ಹೊಸೂರು ವೇಲೂರು ಮಾರ್ಗವಾಗಿ ತಿರುಪತಿಗೆ ಹೋಗಿದ್ದಾರೆ.ಆದ್ರೆ ಸಾಗರ್ ಮಾತ್ರ ಬೆಂಗಳೂರಲ್ಲೇ ಅವಿತು ಕುಳಿತಿದ್ದ. ಅತ್ತ ತಿರುಪತಿಗೆ ತೆರಳಿದ್ದ ಆರು ಜನ ಪಾಪ ಕಳೆದುಕೊಳ್ಳಲು ಮುಡಿಕೊಟ್ಟು, ಅದೇ ಬೋಳು ತಲೆಯಲ್ಲಿ ಬಂದು ಪೊಲೀಸರಿಗೆ ಶರಣಾಗಿದ್ದು ಕೊಲೆ ಕಹಾನಿಯನ್ನು ಖಾಕಿ ಮುಂದೆ ಕಕ್ಕಿದ್ದಾರೆ. ಸದ್ಯ ಏಳು ಜನರನ್ನು ಬಂಧಿಸಿರುವ ಬೊಮ್ಮನಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Edited By : Manjunath H D
PublicNext

PublicNext

12/05/2022 08:27 pm

Cinque Terre

48.56 K

Cinque Terre

1

ಸಂಬಂಧಿತ ಸುದ್ದಿ